ಬೆಂಗಳೂರು | ಹಾಡ ಹಗಲೇ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಯುವತಿಗೆ ಕಿರುಕುಳ; ವೀಡಿಯೊ ವೈರಲ್
ಬೆಂಗಳೂರು: ಹಾಡ ಹಗಲೇ ಯುವಕನೊಬ್ಬ ಯುವತಿಗೆ ಕಿರುಕುಳ ನೀಡಿ ಮೊಬೈಲ್ ಕಸಿಯಲು ಯತ್ನಿಸಿದ ಘಟನೆ ನಗರದ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪುಲಿಕೇಶಿನಗರದ ವಿವೇಕಾನಂದನಗರ ರೆಸಿಡೆನ್ಸಿ ಬಳಿ ಡ್ರ್ಯಾಗರ್ ಹಿಡಿದು ಯುವತಿಯ ಬೆನ್ನಟ್ಟುತ್ತಾ ಬಂದಿದ್ದ ಅಪರಿಚಿತ ಯುವಕನ ಕೈಯಿಂದ ಯುವತಿಯನ್ನು ಮತ್ತೊಬ್ಬ ಮಹಿಳೆ ರಕ್ಷಣೆ ಮಾಡುವ ಸಿಸಿ ಟಿವಿ ವೀಡಿಯೋ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಸಂಬಂಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಈ ಬಗ್ಗೆ ಅಸಮಾಧಾನಗೊಂಡ ಸ್ಥಳೀಯ ನಾಗರಿಕರು ನಗರದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಗಿದೆ. ಸರಿಯಾಗಿ ಹೊಯ್ಸಳ ಪಟ್ರೋಲಿಂಗ್ ಆಗ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story