ಹೆಲ್ಮೆಟ್ ಇಲ್ಲದೆ ಸ್ಕೂಟರ್ ಸವಾರಿ ಮಾಡಿದ ಅಮಿತಾಬ್ ಬಚ್ಚನ್, ಅನುಷ್ಕಾ ಶರ್ಮಾ: ಜನರಿಂದ ಟೀಕೆ
ಹೊಸದಿಲ್ಲಿ: ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಶೂಟಿಂಗ್ ಸ್ಥಳವನ್ನು ತಲುಪಲು ಅಪರಿಚಿತರೊಬ್ಬರ ಬೈಕ್ ನಲ್ಲಿ ಸವಾರಿ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದರು.
ಮುಂಬೈ ಸಂಚಾರ ದಟ್ಟಣೆಯ ಸಮಯದಲ್ಲಿ ತನ್ನ ಸಮಯವನ್ನು ಉಳಿಸಿದ ವ್ಯಕ್ತಿ ತನ್ನನ್ನು ಸಮಯಕ್ಕೆ ಸರಿಯಾಗಿ ಶೂಟಿಂಗ್ ಸ್ಥಳಕ್ಕೆ ತಲುಪಿಸಿದನು ಎಂದು ಲೆಜೆಂಡರಿ ಸ್ಟಾರ್ ಹೇಳಿದರು.
ಒಂದು ದಿನದ ನಂತರ ಅನುಷ್ಕಾ ಶರ್ಮಾ ಕೂಡ ರಸ್ತೆ ಯಲ್ಲಿ ಟ್ರಾಫಿಕ್ ಉಂಟಾದ ನಂತರ ತನ್ನ ಅಂಗರಕ್ಷಕನೊಂದಿಗೆ ಬೈಕ್ ರೈಡ್ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಎರಡೂ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ, ಈ ಸ್ಟಾರ್ಗಳು ಹೆಲ್ಮೆಟ್ ಧರಿಸಿಲ್ಲ ಎಂದು ಹೇಳಿದ್ದಾರೆ.
"ಹೆಲ್ಮೆಟ್ ಎಲ್ಲಿದೆ ಸಾರ್" ಎಂದು ಅಭಿಮಾನಿಯೊಬ್ಬರು ಕೇಳಿದರು. " ಕಂಪ್ಯೂಟರ್ ಜೀ, ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಕ್ಕಾಗಿ ಅವರಿಗೆ ದಂಡ ಹಾಕಿ " ಎಂದು ಒಬ್ಬ ಅಭಿಮಾನಿ ಬರೆದು, ಕೌನ್ ಬನೇಗಾ ಕರೋಡ್ಪತಿಯಿಂದ ಬಿಗ್ ಬಿ ಅವರ ಡೈಲಾಂಗ್ ಅನ್ನು ಕಾಪಿ ಮಾಡಿದ್ದಾರೆ.
ಕೆಲವು ಬಳಕೆದಾರರು ಈ ಘೋಟೊಕ್ಕೆ ಮುಂಬೈ ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಹಲೋ ಮುಂಬೈ ಪೊಲೀಸ್, ಬಾಲಿವುಡ್ ತಾರೆಯರಿಗೆ ಬೇರೆ ಕಾನೂನು ಇದೆಯೇ? ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದಾರೆ, ಚಲನ್ ಮಾಡಿದ್ದೀರೊ ಇಲ್ಲವೋ ಎಂದು ಬಳಕೆದಾರರೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಈ ಘಟನೆ ಎಲ್ಲಿ ಆಗಿದೆ ಎಂದು ಟ್ವಿಟರ್ ಬಳಕೆದಾರರಲ್ಲಿ ಕೇಳಿರುವ ಟ್ರಾಫಿಕ್ ಪೊಲೀಸರು, ಟ್ರಾಫಿಕ್ ಬ್ರ್ಯಾಂಚ್ ಗೆ ಇದನ್ನು ಹಂಚಿಕೊಳ್ಳುತ್ತೇವೆ ಎಂದು ಹೇಳಿದೆ.
ಅಮಿತಾಬ್ ಬಚ್ಚನ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ 'ಪ್ರಾಜೆಕ್ಟ್ ಕೆ' ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡು ಚೇತರಿಸಿಕೊಂಡ ನಂತರ ತಮ್ಮ ಕೆಲಸವನ್ನು ಪುನರಾರಂಭಿಸಿದರು.
हैल्लो @MumbaiPolice क्या इन बॉलीवुडिया के लिए अलग कानून है ?? बिना हेल्मेट के चला रहे, चालान बनाया की नहीं ?? pic.twitter.com/uyhx1bd3Jf
— Hardik Bhavsar (@Bitt2DA) May 15, 2023