ಗುಜರಾತಿನಲ್ಲಿ ನನಗೆ ಬೇಕಾದ ಆಹಾರ ಸಿಗುತ್ತಿಲ್ಲ, ಆದರೆ ಗುಜರಾತಿ ಖಾದ್ಯವನ್ನು ಸವಿಯುತ್ತಿದ್ದೇನೆ ಎಂದ ಶಮಿ

ಅಹ್ಮದಾಬಾದ್: ಸೋಮವಾರ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಿತ್ತು ಸಂಭ್ರಮಿಸಿದ ಗುಜರಾತ್ ಟೈಟನ್ಸ್‌ನ ಮೊಹಮ್ಮದ್ ಶಮಿ ಒಟ್ಟು 13 ಪಂದ್ಯಗಳಲ್ಲಿ 23 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಅನ್ನು ಮತ್ತೆ ತಮ್ಮದಾಗಿಸಿಕೊಂಡಿದ್ದಾರೆ.
ಮ್ಯಾಚ್ ನಂತರದ ಪ್ರೆಸೆಂಟೇಶನ್ ವೇಳೆ ಶಮಿ ಅವರ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದ ಟೀಂ ಇಂಡಿಯಾದ ಮಾಜಿ ಕೋಚ್ ಹಾಗೂ ಐಪಿಎಲ್ ವೀಕ್ಷಕರ ವಿವರಣೆ ತಂಡದ ಸದಸ್ಯರಾಗಿರುವ ರವಿ ಶಾಸ್ತ್ರಿ, ಶಮಿ ಅವರನ್ನುದ್ಧೇಶಿಸಿ “ನಿಮ್ಮ ಐಪಿಎಲ್ 2023 ಯಶಸ್ಸಿನ ಗುಟ್ಟೇನು” ಎಂದು ಕೇಳಿದಾಗ ಶಮಿ ಅವರ ಉತ್ತರ ಎಲ್ಲರ ಗಮನ ಸೆಳೆದಿತ್ತು.
“ಗುಜರಾತ್ ಮೇ ಹೂ, ಮೇರಾ ಖಾನಾ ನಹೀ ಮಿಲೇಗಾ (ಗುಜರಾತ್‌ನಲ್ಲಿದ್ದೀನಿನ, ನನ್ನಿಷ್ಟದ ಆಹಾರ ದೊರಕುವುದಿಲ್ಲ) ಎಂದು ಅವರು ಹೇಳಿದರೂ, ತಕ್ಷಣ ತಂಡದ ಅಭಿಮಾನಿಗಳ ಯಾವುದೇ ಭಾವನೆಗಳಿಗೆ ಧಕ್ಕೆಯಾಗದಂತೆ “ ಲೇಕಿನ್ ಗುಜರಾತಿ ಫುಡ್ ಎಂಜಾಯ್ ಕರ್ ರಹಾ ಹೂ” (ಆದರೆ ಗುಜರಾತಿ ಆಹಾರ ಎಂಜಾಯ್ ಮಾಡುತ್ತಿದ್ದೇನೆ) ಎಂದರು.
Next Story