ಪ್ರತಿಭಾನ್ವಿತ ವಿದ್ಯಾರ್ಥಿನಿ ದೃಶ್ಯ ಶೆಟ್ಟಿಗೆ ಗೌರವಾರ್ಪಣೆ

ಉಡುಪಿ, ಮೇ 16: ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.96.5 ಅಂಕ ಗಳಿಸಿರುವ ಉಡುಪಿ ಸೈಂಟ್ ಸಿಸಿಲಿ ಪ್ರೌಢ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿ ಹಾಗೂ ಅಂಬಲ ಪಾಡಿ ಗ್ರಾಪಂ ಸದಸ್ಯೆ ಸುಜಾತ ದಂಪತಿ ಪುತ್ರಿ ದೃಶ್ಯ ಶೆಟ್ಟಿ ಅಂಬಲಪಾಡಿ ಅವರನ್ನು ಬಿಜೆಪಿ ಅಂಬಲಪಾಡಿ- ಕಡೆಕಾರು ಮಹಾ ಶಕ್ತಿಕೇಂದ್ರದ ವತಿಯಿಂದ ಅವರ ನಿವಾಸದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಅಂಬಲಪಾಡಿ-ಕಡೆಕಾರ್ ಮಹಾಶಕ್ತಿ ಕೇಂದ್ರದ ಸಂಚಾಲಕ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಗ್ರಾಪಂ ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲ ಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಹರೀಶ್ ಆಚಾರ್ಯ, ಬಿಜೆಪಿ ಉಡುಪಿ ನಗರ ಕಾರ್ಯದರ್ಶಿ ದಯಾಶಿನಿ ಪಂದುಬೆಟ್ಟು, ಅಂಬಲಪಾಡಿ ಗ್ರಾಪಂ ಸದಸ್ಯೆ ಭಾರತಿ ಭಾಸ್ಕರ್, ಬಿಜೆಪಿ ಅಂಬಲಪಾಡಿ ಬೂತ್ 178ರ ಅಧ್ಯಕ್ಷ ಮಹೇಂದ್ರ ಕೋಟ್ಯಾನ್ ಹಾಗೂ ಪಾಂಡುರಂಗ ಪಂದುಬೆಟ್ಟು, ದ್ರುವ ಶೆಟ್ಟಿ, ಸುಂದರಿ ಶೆಡ್ತಿ ಉಪಸ್ಥಿತರಿದ್ದರು.