ಬಂಟಕಲ್: ಐಎಸ್‌ಟಿಇ ಘಟಕದ ವಾರ್ಷಿಕ ದಿನಾಚರಣೆ

ಶಿರ್ವ, ಮೇ 16: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐ.ಎಸ್.ಟಿ.ಇ. ಘಟಕದ ವಾರ್ಷಿಕ ದಿನಾಚರಣೆ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭವು ಇತ್ತೀಚೆಗೆ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ ದರು. ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಎರಡು ಉತ್ತಮ ಪ್ರಾಜೆಕ್ಟ್‌ಗಳಿಗೆ ಬಹುಮಾನ ನೀಡಲಾಯಿತು ಮತ್ತು ಐ.ಎಸ್.ಟಿ.ಇ. ಘಟಕದ ಪದಾಧಿಕಾರಿ ಗಳನ್ನು ಸನ್ಮಾನಿಸಲಾಯಿತು.
2022-23ನೇ ಸಾಲಿನಲ್ಲಿ ಐ.ಎಸ್.ಟಿ.ಇ. ಘಟಕದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಚಟುವಟಿಕೆಯನ್ನು ನಡೆಸಿದ್ದಕ್ಕಾಗಿ ವಿದ್ಯುನ್ಮಾನ ಮತ್ತು ಸಂವಹನ ವಿಭಾಗವು ಕ್ರೀಯಾಶೀಲ ವಿಭಾಗ ಪ್ರಶಸಿತಿಯನ್ನು ಪಡೆದು ಕೊಂಡಿತು. ಇದೇ ಸಂಭರ್ದಲ್ಲಿ ಐ.ಎಸ್.ಟಿ.ಇ. ರಾಜ್ಯಮಟ್ಟದ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿ ಪಡೆದ ಶುೃತಾ ವಿ.ಭಟ್ ಅವರನ್ನು ಗೌರವಿಸಲಾಯಿತು.
ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕಿ ಅಕ್ಷತಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಪ್ರಭು ಸ್ವಾಗತಿಸಿದರು. ಗಣಕ ಐಂತ್ರ ವಿಭಾಗದ ವಿದ್ಯಾರ್ಥಿನಿ ಶುೃತಾ ಭಟ್ ವಂದಿಸಿದರು. ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಡೀನ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾ ಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.