ಮಂಗಳೂರು: ಝುಲೇಖಾ ನರ್ಸಿಂಗ್ ಕಾಲೇಜಿನಲ್ಲಿ ಅಂತರ್‌ರಾಷ್ಟ್ರೀಯ ದಾದಿಯರ ದಿನಾಚರಣೆ

ಮಂಗಳೂರು: ಝುಲೇಖಾ ನರ್ಸಿಂಗ್ ಕಾಲೇಜು, ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಯೆನೆಪೋಯ ನರ್ಸಿಂಗ್ ಹೋಮ್ ಸಹಯೋಗದಲ್ಲಿ ಅಂತರ್‌ರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಇತ್ತೀಚೆಗೆ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಜೈಸನ್ ಮಸ್ಕರೇನಸ್ (ಅಸಿಸ್ಟೆಂಟ್ ಮ್ಯಾನೇಜರ್ ಎಚ್‌ಆರ್) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಸ್ಪತ್ರೆಯ ಎಲ್ಲ ದಾದಿಯರನ್ನು ಹೂ ನೀಡಿ ಗೌರವಿಸಿ ಅವರ ಸೇವೆಯನ್ನು ಶ್ಲಾಘಿಸಿದರು.
ಲಿಜೀಯಾ ವಿ. ಹಾಲ್ಡರ್, ಉಪಪ್ರಾಂಶುಪಾಲೆ, ಝುಲೇಖಾ ನರ್ಸಿಂಗ್ ಕಾಲೇಜು ಇವರು ವಿಶ್ವ ಆರೋಗ್ಯ ದಿನದ ಧ್ಯೇಯವಾದ ‘‘ನಮ್ಮ ದಾದಿಯರು ನಮ್ಮ ಭವಿಷ್ಯ’’ ಎಂಬುದನ್ನು ವಿವರಿಸಿ ಈ ಅಭಿಪ್ರಾಯವು ದಾದಿಯರ ಮೇಲೆ ಮತ್ತು ಉಜ್ವಲ ಭವಿಷ್ಯದ ಮೇಲೆ ಬೆಳಕು ಚೆಲ್ಲುತ್ತದೆ ಎಂದು ತಿಳಿಸಿದರು.
ಝುಲೇಖಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಆರ್. ಕನಗವಲ್ಲಿ, ನರ್ಸಿಂಗ್ ವಿಭಾಗದ ಅಧೀಕ್ಷಕಿ ಗ್ರೇಸಿ ಡಿ’ಸಿಲ್ವಾ, ಭಾನುಮತಿ, ಡಾ. ವೀಣಾ ಅಖಿಲ್ ಉಚ್ಚಿಲ್, ಡಾ. ಸವಿತಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೀಣಾ ಡಿ’ಸೋಜರವರಿಗೆ ಈ ವರ್ಷದ ಅತ್ಯುತ್ತಮ ದಾದಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ. ಜಿ. ಪ್ರತಿಭಾ ಸ್ವಾಗತಿಸಿದರು. ಪ್ಲೇವಿಯಾ ವೇಗಸ್ ವಂದಿಸಿದರು.





