ಪಡುಬಿದ್ರೆ : ಸರಣಿ ಅಪಘಾತ; ನಾಲ್ವರಿಗೆ ಗಾಯ
ಪಡುಬಿದ್ರೆ : ಜಂಕ್ಷನ್‍ನಲ್ಲಿ ಮಂಗಳವಾರ ಬೆಳಗ್ಗೆ ಸರಣಿ ಅಪಘಾತವಾಗಿ ಬಸ್‍ನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ. ಕಾರ್ಕಳ ಕಡೆಗೆ ಹೋಗುತ್ತಿದ್ದ ಬಸ್ಸು ಮೊದಲಿಗೆ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಲಾರಿಗೆ ಢಿಕ್ಕಿಯಾಗಿತ್ತು. ಬಳಿಕ ಕಾರ್ಕಳ ರಸ್ತೆ ಬದಿ ಇರಿಸಿದ್ದ ಟ್ರಾಫಿಕ್ ಬೂತ್‍ಗೆ ಬಡಿದ ಬಸ್ ಮುಂದೆ ಸಾಗಿ ಆಟೋ ರಿಕ್ಷಾವೊಂದಕ್ಕೂ ಢಿಕ್ಕಿಯಾಗಿದೆ. ರಿಕ್ಷಾ ಚಾಲಕ ಅಪಘಾತದ ಮುನ್ಸೂಚನೆಯನ್ನರಿತು ರಿಕ್ಷಾ ಬಿಟ್ಟು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ನಿರ್ವಾಹಕ ಪ್ರಮೋದ್, ಪ್ರಯಾಣಿಕ ದಯಾನಂದ ಮುಲ್ಕಿ ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ರಿಕ್ಷಾ ಜಖಂಗೊಂಡಿದೆ. ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story