ಉಮೇಶ್ ಪಾಲ್ ಹತ್ಯೆ ಪ್ರಕರಣ: ಅತೀಕ್ ಅಹ್ಮದ್ ಪತ್ನಿ ಶಾಯಿಸ್ತಾ ಪರ್ವೀನ್‌ಗಾಗಿ ಉ.ಪ್ರ.ಪೊಲೀಸರಿಂದ ಲುಕ್‌ಔಟ್ ನೋಟಿಸ್

ಲಕ್ನೋ,ಮೇ 16: ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್‌ನ ಪತ್ನಿ ಶಾಯಿಸ್ತಾ ಪರ್ವೀನ್,ಆತನ ಇಬ್ಬರು ಸಹಚರರಾದ ಗುಡ್ಡು ಮುಸ್ಲಿಮ್ ಮತ್ತು ಸಾಬಿರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಲುಕ್‌ಔಟ್ ನೋಟಿಸನ್ನು ಹೊರಡಿಸಿದ್ದಾರೆ.
2005ರಲ್ಲಿ ನಡೆದಿದ್ದ ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅವರನ್ನು ಫೆ.24ರಂದು ಪ್ರಯಾಗರಾಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಉ.ಪ್ರ.ಪೊಲೀಸರು ಅತೀಕ್ ಅಹ್ಮದ್,ಆತನ ಸೋದರ ಅಶ್ರಫ್ ಅಹ್ಮದ್, ಪರ್ವೀನ್ ಮತ್ತು ಆಕೆಯ ಇಬ್ಬರು ಪುತ್ರರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಎ.15ರಂದು ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ಅತೀಕ್ ಮತ್ತು ಅಷ್ರಫ್‌ರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ರಾಜ್ಯ ಪೊಲೀಸರು ಈ ಹಿಂದೆ ಪರ್ವೀನ್ ಬಂಧನಕ್ಕೆ ನೆರವಾಗುವ ಮಾಹಿತಿಗಾಗಿ 50,000 ರೂ.ಗಳ ಬಹುಮಾನವನ್ನೂ ಘೋಷಿಸಿದ್ದರು,ಆದರೆ ಪರ್ವೀನ್ ಈವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ.





