Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾಂಗ್ರೆಸ್ ಗೆಲುವನ್ನು ಅರಗಿಸಿಕೊಳ್ಳಲಾರದ...

ಕಾಂಗ್ರೆಸ್ ಗೆಲುವನ್ನು ಅರಗಿಸಿಕೊಳ್ಳಲಾರದ ಮನಃಸ್ಥಿತಿಯ ಸುತ್ತಮುತ್ತ

ಅಪೂರ್ವಾನಂದಅಪೂರ್ವಾನಂದ17 May 2023 10:30 AM IST
share
ಕಾಂಗ್ರೆಸ್ ಗೆಲುವನ್ನು ಅರಗಿಸಿಕೊಳ್ಳಲಾರದ ಮನಃಸ್ಥಿತಿಯ ಸುತ್ತಮುತ್ತ

ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಾಗಿ ತಂಡವಾಗಿ ಚುನಾವಣೆ ಎದುರಿಸಿದರು. ದೊಡ್ಡ ಗುರಿ ಸಾಧಿಸಲು ತಮ್ಮ ಮಹತ್ವಾಕಾಂಕ್ಷೆಗಳನ್ನು ಅವರು ಬಿಡಲಿಲ್ಲ. ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ನಾಯಕತ್ವದ ಸಮಸ್ಯೆಯನ್ನು ಮೊದಲು ಪರಿಹರಿಸಬೇಕು ಎಂದು ಒತ್ತಾಯಿಸಲಿಲ್ಲ. ಇದು ನಿಸ್ಸಂಶಯವಾಗಿ ಅವರ ನಿರ್ಧಾರವಾಗಿತ್ತು. ಆದರೆ ಅವರಿಬ್ಬರನ್ನೂ ಒಗ್ಗೂಡಿಸುವಲ್ಲಿ, ಮುನ್ನಡೆಸುವಲ್ಲಿ ಕೇಂದ್ರ ಕಾಂಗ್ರೆಸ್ ನಾಯಕತ್ವದ ಪಾತ್ರ ಇರಲಿಲ್ಲವೇ?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆದ್ದಾಗಿದೆ. ಕಾಂಗ್ರೆಸ್ ಸರಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 113ರ ಆಸುಪಾಸಿನಲ್ಲಿ ಎಲ್ಲೋ ಉಳಿದುಬಿಡಬಹುದು ಎಂಬ ಅನುಮಾನ ಕಾಡುತ್ತಲೇ ಇತ್ತು. ಅದಕ್ಕೆ ತಕ್ಕಂತೆ ಇನ್ನೊಂದೆಡೆ, ಕಡಿಮೆ ಸ್ಥಾನ ಪಡೆದರೂ ಸರಕಾರ ರಚಿಸುವುದು ಖಚಿತ. ಅದಕ್ಕಾಗಿ ಪ್ಲ್ಯ್ಲಾನ್ ಬಿ ಸಿದ್ಧವಿದೆ ಎಂದೂ ಅಡ್ಡದಾರಿಯಿಂದಲೇ ಸರಕಾರ ರಚಿಸುವುದರಲ್ಲಿ ಪಳಗಿದ ಬಿಜೆಪಿಯ ನಾಯಕರು ನಿರ್ಲಜ್ಜವಾಗಿ ಹೇಳಿದ್ದೂ ಆಗಿತ್ತು. ಅದರರ್ಥ, ಈ ಹಿಂದೆ ಕರ್ನಾಟಕದಲ್ಲಿ ಮತ್ತು ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರದಲ್ಲಿ ಮಾಡಿದಂತೆ ಚುನಾಯಿತ ಪ್ರತಿನಿಧಿಗಳನ್ನು ಖರೀದಿಸುವುದು ಅಥವಾ ಏಜೆನ್ಸಿಗಳನ್ನು ಬಳಸಿಕೊಂಡು ಅವರನ್ನು ಒಡೆಯುವುದಕ್ಕೆ ಅದು ಮುಂದಾಗಲೂಬಹುದು ಎಂಬ ಆತಂಕವಿದ್ದೇ ಇತ್ತು.

ಕಡೆಗೂ, ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗೆದ್ದುಕೊಂಡಾಗ, ಇದು ಬಿಜೆಪಿಯ ಸೋಲಲ್ಲ, ಕಾಂಗ್ರೆಸ್‌ನ ಗೆಲುವು ಎಂದು ಹೇಳಲಾಯಿತು. ಸ್ಥಾನಗಳ ಸಂಖ್ಯೆ ಬಿಟ್ಟು ಶೇಕಡಾವಾರು ಮತಗಳನ್ನು ವಿಶ್ಲೇಷಿಸಿದರೆ, ಬಿಜೆಪಿ ಶೇ. 36ರಷ್ಟು ಮತಗಳನ್ನು ಪಡೆದುಕೊಂಡಿದೆ. ಹಿಂದಿನ ಚುನಾವಣೆಗಳಲ್ಲೂ ಇಷ್ಟೇ ಇತ್ತು. ಹಾಗಾದರೆ ಇದನ್ನು ಸಮಗ್ರ ಸೋಲು ಎನ್ನುವುದು ಹೇಗೆ ಎಂಬ ವಾದವೂ ಎದ್ದಿತು.

ಆದರೆ ಬಿಜೆಪಿಯ ಶೇಕಡಾವಾರು ಮತಗಳ ಸ್ಥಿರತೆ ಖಂಡಿತವಾಗಿಯೂ ಕಳವಳಕಾರಿ. ಹಿಂದುತ್ವದ ಅಮಲಿನಲ್ಲಿ ಎಲ್ಲವನ್ನೂ ಮರೆತ ಮತದಾರರ ಒಂದು ವರ್ಗವಿದ್ದರೂ, ಈ ಹಿಂದೆ ಬಿಜೆಪಿಗೆ ಮತ ಹಾಕಿ ಈಗ ಕಾಂಗ್ರೆಸ್‌ಗೆ ಮತ ಹಾಕಿದ ಒಂದು ದೊಡ್ಡ ವರ್ಗವೂ ಇದೆ ಎಂಬುದು ಬಹಳ ಮುಖ್ಯ. ಹಾಗೆಯೇ, ಜೆಡಿಎಸ್ ಕಡೆ ಒಲವಿದ್ದ ಮತದಾರರು ತಮ್ಮ ಆದ್ಯತೆ ಬದಲಾಯಿಸಿದ್ದರೆ, ಅದು ಕೂಡ ವಿಶ್ಲೇಷಿಸಬೇಕಾದ ಪ್ರಮುಖ ಅಂಶ. ಅಂದರೆ, ಅವರಿಗೆ ಬಿಜೆಪಿಯನ್ನು ಸೋಲಿಸುವುದು ಹೆಚ್ಚು ತುರ್ತು ಅಗತ್ಯವಾಗಿತ್ತು ಎಂಬುದು ಸ್ಪಷ್ಟ. 

ಇದು ಕೇಸರಿ ಪಕ್ಷದ ನಿರ್ಣಾಯಕ ಸೋಲು ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಕರ್ನಾಟಕದ ಪ್ರತಿಯೊಂದು ವಲಯವೂ ಆ ಪಕ್ಷವನ್ನು ಹೇಗೆ ತಿರಸ್ಕರಿಸಿದೆ ಎಂಬುದನ್ನು ಫಲಿತಾಂಶ ತೋರಿಸಿದೆ. ಈ ಸೋಲಿನ ಮಹತ್ವವನ್ನು ಅಲ್ಲಗಳೆಯುವುದು ಒಂದು ರೀತಿಯ ಅಪ್ರಾಮಾಣಿಕತೆ.

ಅಂತೆಯೇ, ಕಾಂಗ್ರೆಸ್ ಗೆಲುವಿನಲ್ಲಿ ಕೇಂದ್ರ ನಾಯಕತ್ವದ ಪಾತ್ರವೂ ಬಹಳ ಇದೆ. ಅದನ್ನು ನಿರಾಕರಿಸುವುದು ಕೂಡ ಅಷ್ಟೇ ಅಪ್ರಾಮಾಣಿಕತೆಯಾದೀತು. ಕಾಂಗ್ರೆಸ್ ಸ್ಥಳೀಯ ಸಮಸ್ಯೆಗಳ ಮೇಲೆ ಚುನಾವಣೆ ಎದುರಿಸಿದೆ, ನಿಜ. ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಚುನಾವಣೆ ನಡೆದಿರುವುದೂ ನಿಜವೇ. ಖಂಡಿತ ರಾಜ್ಯ ನಾಯಕರ ಶ್ರಮ ಪಕ್ಷದ ಗೆಲುವಿಗೆ ಕಾರಣ. ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ಬಣಗಳ ನಡುವಿನ ಪೈಪೋಟಿಯೂ ಬಹಳ ದಿನಗಳಿಂದ ಚರ್ಚೆಯ ವಿಷಯವಾಗಿಯೇ ಇದೆ. ಈ ಬಣ ರಾಜಕೀಯ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದೆಂದೂ ಕೆಲವರು ಆತಂಕ ವ್ಯಕ್ತಪಡಿಸಿದ್ದರು ಮತ್ತು ಅನೇಕರು ಅದನ್ನು ಬಯಸಿದ್ದರು ಕೂಡ. ಆದರೆ ಹಾಗಾಗಲಿಲ್ಲ.

ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಾಗಿ ತಂಡವಾಗಿ ಚುನಾವಣೆ ಎದುರಿಸಿದರು. ದೊಡ್ಡ ಗುರಿ ಸಾಧಿಸಲು ತಮ್ಮ ಮಹತ್ವಾಕಾಂಕ್ಷೆಗಳನ್ನು ಅವರು ಬಿಡಲಿಲ್ಲ. ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ನಾಯಕತ್ವದ ಸಮಸ್ಯೆಯನ್ನು ಮೊದಲು ಪರಿಹರಿಸಬೇಕು ಎಂದು ಒತ್ತಾಯಿಸಲಿಲ್ಲ. ಇದು ನಿಸ್ಸಂಶಯವಾಗಿ ಅವರ ನಿರ್ಧಾರವಾಗಿತ್ತು. ಆದರೆ ಅವರಿಬ್ಬರನ್ನೂ ಒಗ್ಗೂಡಿಸುವಲ್ಲಿ, ಮುನ್ನಡೆಸುವಲ್ಲಿ ಕೇಂದ್ರ ಕಾಂಗ್ರೆಸ್ ನಾಯಕತ್ವದ ಪಾತ್ರ ಇರಲಿಲ್ಲವೇ?
ಶಿವಕುಮಾರ್ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದು ಕೇಂದ್ರ ನಾಯಕತ್ವ. 

ಬಿಜೆಪಿ ಸರಕಾರ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಿದಾಗ, ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜೈಲಿನಲ್ಲಿ ಭೇಟಿಯಾಗಲು ಹೋಗಿ ಅವರ ಮೇಲೆ ತಮಗಿರುವ ನಂಬಿಕೆಯನ್ನು ದೃಢವಾಗಿ ವ್ಯಕ್ತಪಡಿಸಿದ್ದರು. ಅದು ಆ ಹೊತ್ತಿನಲ್ಲಿ ಒಂದು ದಿಟ್ಟ ಸಾರ್ವಜನಿಕ ಸೂಚನೆಯಾಗಿತ್ತು.

ಅವರ ಮೇಲಿನ ಭ್ರಷ್ಟಾಚಾರ ಆರೋಪದಲ್ಲಿ ತನಗೂ ಪಾಲು ಹೊರಿಸಲು ಮತ್ತು ಸಾರ್ವಜನಿಕ ಪ್ರತಿಷ್ಠೆಯನ್ನು ಹಾಳುಮಾಡಲು ಸಿಕ್ಕ ಯಾವುದೇ ಅವಕಾಶವನ್ನೂ ಮಾಧ್ಯಮಗಳು ಬಿಡುವುದಿಲ್ಲ ಎಂದು ಗೊತ್ತಿದ್ದರೂ ಶಿವಕುಮಾರ್ ಅವರಿಂದ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ದೂರವಾಗಲಿಲ್ಲ. ನಂತರ, ಒಂದು ರೀತಿಯಲ್ಲಿ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ರಾಜ್ಯ ನಾಯಕತ್ವದ ನಿರ್ದೇಶನದಂತೆ ಪ್ರಚಾರ ನಡೆಸಿತು. 

ಇದೆಲ್ಲ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ತೋರಿದ ಮಹತ್ವದ ನಡೆಗಳೇ. ಹಾಗಾಗಿ, ಕೇಂದ್ರ ನಾಯಕತ್ವದ ಕೊಡುಗೆಯನ್ನು ಒಪ್ಪಿಕೊಳ್ಳಲೇಬೇಕು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆಯ ಪರಿಣಾಮ ಈ ಚುನಾವಣೆಯಲ್ಲಿ ಪಾತ್ರ ವಹಿಸಿಲ್ಲ ಎಂದು ಯಾರಾದರೂ ಹೇಳಿದರೆ ಅದು ಬೌದ್ಧಿಕ ಅಪ್ರಾಮಾಣಿಕತೆಯಾಗುತ್ತದೆ. ಯಾತ್ರೆಯಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕತ್ವದ ಪಾಲ್ಗೊಳ್ಳುವಿಕೆ ಖಂಡಿತವಾಗಿಯೂ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿತು. ಪಕ್ಷ ಜನಬೆಂಬಲ ಗಳಿಸಲು ಯಾತ್ರೆ ನೆರವಾಯಿತು.

ಈ ಯಾತ್ರೆ ನಡೆಯುತ್ತಿರುವಾಗ ಕರ್ನಾಟಕ ಚುನಾವಣೆ ಇನ್ನೂ ದೂರವಿತ್ತು ಮತ್ತು ಯಾತ್ರೆಯ ಗುರಿ ಮತದಾರರನ್ನು ಚುನಾವಣೆಗೆ ಸಜ್ಜುಗೊಳಿಸುವುದು ಆಗಿರಲಿಲ್ಲ ಎಂಬುದು ನಿಜ. ಕೆಲ ವಿಶ್ಲೇಷಕರು ಯಾತ್ರೆಯನ್ನು ಗೇಲಿ ಮಾಡುತ್ತಿದ್ದರು. ಇದು ಯಾವುದೇ ರಾಜಕಾರಣಿಯ ಕೆಲಸವಲ್ಲ ಎಂದು ಹೇಳುತ್ತಿದ್ದರು. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಾತ್ರ ರಾಹುಲ್ ಗಾಂಧಿ ತಮ್ಮ ನಾಯಕತ್ವ ಸಾಬೀತುಪಡಿಸಬೇಕು ಎಂದು ಅವರು ಹೇಳುತ್ತಿದ್ದರು. ಈ ಯಾತ್ರೆಯನ್ನು ರಾಜಕೀಯ ಪಂಡಿತರು ಸಿನಿಕತನದಿಂದ ನೋಡಿದ್ದರೆಂಬುದು ನಿಜ. 

ರಾಜಕಾರಣಿಗಳು ಸಹ ಸಾಮಾಜಿಕ ತೊಡಗಿಸಿಕೊಳ್ಳುವಿಕೆಯ ಹೊಸ ಭಾಷೆಯನ್ನು ಕಾಣಿಸಲು ಸಾಧ್ಯವಿದೆ ಎಂಬುದನ್ನು ಭಾರತ್ ಜೋಡೊ ಯಾತ್ರೆಯಲ್ಲಿ ನೋಡುವ ಸಣ್ಣ ಪ್ರಯತ್ನವನ್ನೂ ಅವರು ಮಾಡಲಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳಲು ಅವರಿನ್ನೂ ಸಿದ್ಧರಿಲ್ಲ.

ಕರ್ನಾಟಕದ ವಿಷಮಯ ವಾತಾವರಣದಲ್ಲಿ ಯಾತ್ರೆ ಸದ್ದಿಲ್ಲದೆ ಮಧ್ಯಪ್ರವೇಶಿಸಿತ್ತು. ಇದು ಸಾರ್ವಜನಿಕರ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಿರಲೇಬೇಕಲ್ಲವೆ? 21 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಿದ್ದು, ಈ ಪೈಕಿ 16 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಫಲಿತಾಂಶ ಬಂದಿರುವುದು ಗಮನಾರ್ಹ. ಕಳೆದ ಬಾರಿ ಈ ಕ್ಷೇತ್ರಗಳ ಪೈಕಿ ಐದರಲ್ಲಿ ಮಾತ್ರ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಿತ್ತು.

ಅಂಕಿ ಅಂಶಗಳ ಪ್ರಕಾರ ಸುತ್ತಮುತ್ತಲ ಪ್ರದೇಶಗಳಲ್ಲೂ ಕಾಂಗ್ರೆಸ್‌ಗೆ ಬೆಂಬಲ ಹೆಚ್ಚಿದೆ. ಕರ್ನಾಟಕದ ಇಬ್ಬರು ನಾಯಕರು ಯಾತ್ರೆಯನ್ನು ಸಂಘಟಿಸಿದ ರೀತಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಹುರುಪು ಮೂಡಿಸಿತು. ಯಾತ್ರೆಯ ಸಮಯದಲ್ಲಿಯೇ, ಈ ಉತ್ಸಾಹ ಮತ್ತು ಸಂಘಟನೆ ಖಂಡಿತವಾಗಿಯೂ ಚುನಾವಣೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜನರಿಗೆ ಅನ್ನಿಸಿತ್ತು.

ಇಂತಹ ಅಭಿಯಾನಗಳು ಸಮಾಜದ ಮೇಲೆ ಪರೋಕ್ಷ ಪ್ರಭಾವ ಬೀರುತ್ತವೆ ಎಂದು ನಮಗೆಲ್ಲರಿಗೂ ಗೊತ್ತು. ಇದನ್ನು ಹೀಗೇ ಇಷ್ಟೇ ಎಂದೇನೂ ಅಳೆಯಲಾಗುವುದಿಲ್ಲ. ಮಹಾತ್ಮಾ ಗಾಂಧಿಯವರ ರಚನಾತ್ಮಕ ಕಾರ್ಯಕ್ರಮ ವಸಾಹತುಶಾಹಿ ವಿರೋಧಿ ಚಳವಳಿಯ ಮೇಲೆ ನೇರ ಪರಿಣಾಮ ಬೀರಿದೆಯೇ? ಇವೆರಡರ ನಡುವೆ ನೇರ ಸಂಬಂಧ ಇಲ್ಲದಿದ್ದರೂ ಅದು ಮುಖ್ಯವೇ ಅಲ್ಲವೆ? ಹೀಗಿರುವಾಗ ಕರ್ನಾಟಕದ ಚುನಾವಣಾ ಫಲಿತಾಂಶಕ್ಕೆ ಯಾತ್ರೆ ಬಹುತೇಕ ಅಪ್ರಸ್ತುತವಾಗಿತ್ತು ಎಂದು ಹೇಗೆ ಹೇಳಲು ಸಾಧ್ಯ?ಯಾತ್ರೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಮಾಡಲಿಲ್ಲ. ಇದು ಟೀಕೆಗೆ ಗುರಿಯಾಯಿತು. ಅವರ ಗುರಿಯೇನೆಂಬುದನ್ನು ಹೊಗಳುವ ಬದಲು, ಚುನಾವಣೆಯಲ್ಲಿ ಗೆದ್ದರೆ ಮಾತ್ರ ಅವರು ಗಂಭೀರವಾಗಿ ಪರಿಗಣಿಸಲ್ಪಡುತ್ತಾರೆ ಎಂದೆಲ್ಲ ಹೇಳಲಾಯಿತು.

ಆನಂತರ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿಯೂ ಪಾಲ್ಗೊಂಡರು. ಆದರೆ ಆಮೇಲೆಯೂ ಈ ಗೆಲುವಿನಲ್ಲಿ ಅವರ ಕೊಡುಗೆಯನ್ನು ಒಪ್ಪಲು ಹಿಂಜರಿಯಲಾಗುತ್ತಿದೆ.
ಕಾಂಗ್ರೆಸ್‌ನಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸೋನಿಯಾ ಗಾಂಧಿ ನಡುವೆ ಪರಸ್ಪರ ತಿಳುವಳಿಕೆ ಇದೆ ಮತ್ತು ಗಾಂಧಿ ಕುಟುಂಬದ ಸದಸ್ಯರು ತಮಗೆ ವಹಿಸಿದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ನಂಬಲು ಅನೇಕರಿಗೆ ಅಗುತ್ತಿಲ್ಲ.

ಕಾಂಗ್ರೆಸ್ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಸ್ವೀಕರಿಸಿದೆ ಮತ್ತು ಪಕ್ಷದಲ್ಲಿ ಅವರೂ ಒಬ್ಬರಂತೆ ಇದ್ದಾರೆ. ಆದರೆ ನಮ್ಮ ಬುದ್ಧಿಜೀವಿಗಳ ಒಂದು ವರ್ಗ ಅದನ್ನು ತೋರಿಕೆ ಎಂದು ಪರಿಗಣಿಸುತ್ತದೆ. ಸೋನಿಯಾ ಗಾಂಧಿಯವರ ಮೇಲೆ ಅವರಿಗಿರುವ ಗೌರವವನ್ನು ಭಜನೆ ಎನ್ನಲಾಗುತ್ತದೆ. ಅಂಥ ಹೊಗಳಿಕೆಗೆ ಅವರು ಅರ್ಹರಲ್ಲ ಎಂಬ ಭಾವನೆ ವ್ಯಕ್ತಪಡಿಸಲಾಗುತ್ತದೆ. ಇದು ಸಾಯುತ್ತಿದ್ದ ಕಾಂಗ್ರೆಸ್‌ಗೆ ಜೀವ ತುಂಬಿದ ಮತ್ತು ಪಕ್ಷದ ಸುತ್ತ ದೊಡ್ಡ ರಾಜಕೀಯ ಕ್ರೋಡೀಕರಣವನ್ನು ಉಂಟುಮಾಡಿದ ನಾಯಕಿಯ ಬಗೆಗಿನ ಇವರ ತಿಳುವಳಿಕೆಯಾಗಿದೆ. ಸೋನಿಯಾ ರಾಜಕೀಯ ಪ್ರೌಢಿಮೆಯನ್ನು ಒಪ್ಪಿಕೊಳ್ಳಲು ಇವರು ತಯಾರಿಲ್ಲ.

ಇದೇ ಜನ ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ಘೋಷಣೆಯನ್ನು ರಾಹುಲ್ ಗಾಂಧಿ ತಂಡದ ಮೂರ್ಖತನ ಎಂದು ಕರೆಯಬಲ್ಲರು. ಇದರಿಂದ ಕಾಂಗ್ರೆಸ್‌ಗೆ ತೊಂದರೆಯಾಗುತ್ತದೆ ಎಂಬ ಭಯ ಅವರಲ್ಲಿತ್ತು. ಆದರೆ ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ‘ಬಜರಂಗ ಬಲಿ ಕೀ ಜೈ’ ಘೋಷಣೆಯನ್ನು ಮತ್ತೆ ಮತ್ತೆ ಮಾಡಿದ್ದು ಬಿಜೆಪಿಯನ್ನು ಮತ್ತಷ್ಟು ಕೆಳಕ್ಕೆ ತಳ್ಳಿತು. ಆಗಲೂ, ಬಜರಂಗದಳದ ಮೇಲೆ ನಿಷೇಧ ಹೇರುವುದಾಗಿ ಘೋಷಿಸಿದ ಕಾಂಗ್ರೆಸ್‌ನ ರಾಜಕೀಯ ಧೈರ್ಯವನ್ನು ಕೊಂಡಾಡುವ ನೈತಿಕ ಧೈರ್ಯ ಬುದ್ಧಿಜೀವಿಗಳಿಗೆ ಇರಲಿಲ್ಲ.

ಮುಸ್ಲಿಮರನ್ನು ಓಲೈಸಿ ಕಾಂಗ್ರೆಸ್ ಜಾಣತನ ಮೆರೆದಿದೆ ಎಂದೂ ಹೇಳಲಾಗಿದೆ. ಆದರೆ ಅದು ಓಲೈಸುವಿಕೆಗಿಂತ ಹೆಚ್ಚಾಗಿ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಅಭದ್ರತೆಯ ವಿಚಾರದಲ್ಲಿ ಪಕ್ಷ ತೋರಿದ ಸೂಕ್ಷ್ಮತೆಯಾಗಿದೆ. ಈ ಹಿಂಸಾತ್ಮಕ ಮತ್ತು ಕ್ರಿಮಿನಲ್ ಸಂಘಟನೆಯನ್ನು ತಾವೇ ಒಪ್ಪುವುದಿಲ್ಲ ಎಂದು ಘೋಷಿಸುವ ಮೂಲಕ ಹಿಂದೂಗಳ ಆತ್ಮಸಾಕ್ಷಿಯ ಮೇಲೆ ವಿಶ್ವಾಸ ವ್ಯಕ್ತಪಡಿಸಿತು.

ಕಾಂಗ್ರೆಸ್ ಪಿಎಫ್‌ಐ ಮೇಲೆಯೂ ನಿಷೇಧ ವಿಚಾರ ಪ್ರಸ್ತಾಪಿಸಿದೆ. ಆದರೆ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಯಾವುದೇ ರೀತಿಯಲ್ಲಿ ಒಪ್ಪಿಕೊಳ್ಳಬಾರದು ಎಂದೂ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಜಾತ್ಯತೀತ ರಾಜಕೀಯ ಎಂದರೆ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ರಕ್ಷಣೆ. ಅವರು ಘನತೆಯಿಂದ ಬದುಕಲು ಅನುವು ಮಾಡಿಕೊಡುವುದು.
ಕರ್ನಾಟಕದಲ್ಲಿ ಕಾಂಗ್ರೆಸ್‌ನ ಈ ಭಾರೀ ಗೆಲುವು 2024ರ ಸಾರ್ವತ್ರಿಕ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ? ಇದು ಒಂದು ಪ್ರಮುಖ ಪ್ರಶ್ನೆ. ಆದರೆ ದ್ವೇಷ ಮತ್ತು ವಿಭಜನೆಯ ರಾಜಕೀಯದ ಅಬ್ಬರ ಈಗಿನ ಜನಾದೇಶದ ಮಹತ್ವವನ್ನು ಕಳಂಕಗೊಳಿಸಲಾರದು ಎಂಬುದಂತೂ ನಿಜ.

ಈ ಜನಾದೇಶದ ಸಂದೇಶವನ್ನು ಉತ್ತರದ ಜನತೆಗೆ ಮುಟ್ಟಿಸದಿದ್ದರೆ ಕರ್ನಾಟಕದ ಜನಾದೇಶದ ಮಹತ್ವ ಕಡಿಮೆಯಾಗುವುದೆ? ಕರ್ನಾಟಕದ ಜನರು ಸಾಮರಸ್ಯದಿಂದ ಬದುಕುವ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ. ಅದು ಅವರ ಹಕ್ಕು. ಇಲ್ಲಿನ ಈ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಏನು ಪರಿಣಾಮ ಬೀರೀತು ಎಂಬುದು ಬೇರೆ ಮಾತು ಮತ್ತದು ಅಷ್ಟು ಮುಖ್ಯವೂ ಅಲ್ಲ. 

(ಕೃಪೆ: thewire.in)

share
ಅಪೂರ್ವಾನಂದ
ಅಪೂರ್ವಾನಂದ
Next Story
X