ಸೌರವ್ ಗಂಗುಲಿ ಅವರ ಭದ್ರತೆ ಹೆಚ್ಚಿಸಲು ಪಶ್ಚಿಮಬಂಗಾಳ ಸರಕಾರ ನಿರ್ಧಾರ

ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗುಲಿ (Sourav Ganguly)ಅವರ ಭದ್ರತೆಯನ್ನು ಝಡ್ ಶ್ರೇಣಿಗೆ ಮೇಲ್ದರ್ಜೆಗೇರಿಸಲು ಪಶ್ಚಿಮ ಬಂಗಾಳ ಸರಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಗುಲಿ ಅವರಿಗೆ ನೀಡಲಾಗಿದ್ದ ವೈ ಕೆಟಗರಿ ಭದ್ರತೆಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮಂಗಳವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
"ವಿವಿಐಪಿಯ ಭದ್ರತೆಯ ಅವಧಿ ಮುಗಿದಿರುವುದರಿಂದ, ಪ್ರೋಟೋಕಾಲ್ ಪ್ರಕಾರ ಪರಿಶೀಲನೆ ನಡೆಸಲಾಯಿತು ಹಾಗೂ ಗಂಗುಲಿ ಅವರ ಭದ್ರತಾ ಕಾರ್ಡನ್ ಅನ್ನು Z ವರ್ಗಕ್ಕೆ ಏರಿಸಲು ನಿರ್ಧರಿಸಲಾಯಿತು" ಎಂದು ಅವರು ಹೇಳಿದರು.
ಹೊಸ ಭದ್ರತಾ ವ್ಯವಸ್ಥೆ ಪ್ರಕಾರ, ಮಾಜಿ ಕ್ರಿಕೆಟಿಗನಿಗೆ 8 ರಿಂದ 10 ಪೊಲೀಸ್ ಸಿಬ್ಬಂದಿಯ ಕಾವಲು ಇರಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವೈ ಕೆಟಗರಿ ಭದ್ರತೆಯ ಅಡಿಯಲ್ಲಿ, ಗಂಗುಲಿ ಅವರು ತಮ್ಮ ಕಾರ್ಡನ್‌ನಲ್ಲಿ ಸ್ಪೆಷಲ್ ಬ್ರಾಂಚ್‌ನಿಂದ ಮೂವರು ಪೊಲೀಸರನ್ನು ಹಾಗೂ ಅವರ ಬೆಹಾಲಾ ನಿವಾಸದ ಭದ್ರತೆಗೆ ಸಮಾನ ಸಂಖ್ಯೆಯ ಕಾನೂನು ಪರಿಪಾಲಕರನ್ನು ಪಡೆಯುತ್ತಿದ್ದರು.





