Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಧಿಕ ರಕ್ತದೊತ್ತಡದ ನಿಯಂತ್ರಣವಿರಲಿ

ಅಧಿಕ ರಕ್ತದೊತ್ತಡದ ನಿಯಂತ್ರಣವಿರಲಿ

ಇಂದು ವಿಶ್ವ ಅಧಿಕ ರಕ್ತದೊತ್ತಡ ಜಾಗೃತಿ ದಿನ

ಡಾ. ಮುರಲೀ ಮೋಹನ್, ಚೂಂತಾರುಡಾ. ಮುರಲೀ ಮೋಹನ್, ಚೂಂತಾರು17 May 2023 12:18 PM IST
share
ಅಧಿಕ ರಕ್ತದೊತ್ತಡದ ನಿಯಂತ್ರಣವಿರಲಿ
ಇಂದು ವಿಶ್ವ ಅಧಿಕ ರಕ್ತದೊತ್ತಡ ಜಾಗೃತಿ ದಿನ

ಪ್ರತೀ ವರ್ಷ ಮೇ 17ರಂದು ವಿಶ್ವದೆಲ್ಲೆಡೆ ವಿಶ್ವ ಅಧಿಕ ರಕ್ತದೊತ್ತಡ ಜಾಗೃತಿ ದಿನ ಎಂದು ಆಚರಿಸಿ ಅಧಿಕ ರಕ್ತದೊತ್ತಡದಿಂದ ಉಂಟಾಗುವ ದೀರ್ಘಕಾಲಿಕ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಆಚರಣೆಯನ್ನು 2005ರಲ್ಲಿ ಆರಂಭಿಸಲಾಯಿತು.

2000ನೇ ಇಸವಿಯಲ್ಲಿ ಭಾರತ ದೇಶದಲ್ಲಿ 118 ಮಿಲಿಯನ್ ಮಂದಿ ಅಧಿಕ ರಕ್ತದೊತ್ತಡ ರೋಗಿಗಳಿದ್ದು ಈ ಸಂಖ್ಯೆ 2025ರಲ್ಲಿ 214 ಮಿಲಿಯನ್ಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದಲ್ಲಿ ಭಾರತ ವಿಶ್ವದ ಅಧಿಕ ರಕ್ತದೊತ್ತಡದ ರಾಜಧಾನಿ ಎಂಬ ಕುಖ್ಯಾತಿಯನ್ನುಗಳಿಸಲಿದೆ. ನಮ್ಮ ಭಾರತದೇಶದಲ್ಲಿ ಜನಸಂಖ್ಯೆಯ 75 ಶೇ. ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಮತ್ತು ವಿಪರ್ಯಾಸವೆಂದರೆ ಈ 75 ಶೇ. ಮಂದಿಯಲ್ಲಿ ಶೇ. 50 ಮಂದಿಗೆ ತಮಗೆ ಅಧಿಕ ರಕ್ತದೊತ್ತಡ ಇದೆ ಎಂಬುದರ ಅರಿವೆಯೇ ಇಲ್ಲ. 

ಮನುಷ್ಯರಲ್ಲಿ ಹೃದಯಾಘಾತ ಮತ್ತು ಸ್ಟ್ರೋಕ್(ಮೆದುಳಿನ ಆಘಾತ) ಉಂಟಾಗಲು ಮೂಲ ಕಾರಣ ಅಧಿಕ ರಕ್ತದೊತ್ತಡ ಆಗಿರುತ್ತದೆ. ಈ ಕಾರಣದಿಂದ ಮೇ ತಿಂಗಳನ್ನು ಅಧಿಕ ರಕ್ತದೊತ್ತಡ ಜಾಗೃತಿ ಮಾಸ ಎಂದು ಆಚರಿಸಿ ಜನರಲ್ಲಿ ಅಧಿಕ ರಕ್ತದೊತ್ತಡದಿಂದ ಉಂಟಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳು ಮತ್ತು ಅಪಾಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ದೇಶದೆಲ್ಲೆಡೆ ಮಾಡಲಾಗುತ್ತಿದೆ.

ಇದೊಂದು ನಿಧಾನವಾಗಿ ಕೊಲ್ಲುವ ರೋಗವಾಗಿದ್ದು, ದಿನ ಬೆಳಗಾಗುವುದರಲ್ಲಿ ವ್ಯಕ್ತಿಯನ್ನು ಕೊಲ್ಲುವುದಿಲ್ಲ. ಹೃದಯ, ಕಿಡ್ನಿ ಮೆದುಳು, ಕಣ್ಣು, ಹೀಗೆ ಒಂದೊಂದು ಅಂಗಗಳನ್ನು ನಿಧಾನವಾಗಿ ನಿರ್ದಯವಾಗಿ ಹಾಳುಗೆಡವಿ ಸದ್ದಿಲ್ಲದೆ ಸಾವಿಗೆ ಮುನ್ನುಡಿ ಬರೆಯುತ್ತದೆ. ಈ ಕಾರಣದಿಂದಲೇ ಅಧಿಕ ರಕ್ತದೊತ್ತಡವನ್ನು ‘ನಿಶ್ಯಬ್ದ ಕೊಲೆಗಾರ’ ಅಥವಾ ‘ಸೈಲೆಂಟ್ ಕಿಲ್ಲರ್’ ಎಂದು ಕರೆಯುತ್ತಾರೆ. ಜೀವನಶೈಲಿಗೆ ಸಂಬಂಧಿಸಿದ ರೋಗ ಇದಾಗಿದ್ದು ಅನಿಯಂತ್ರಿತ ಆಹಾರ ಪದ್ಧತಿ, ದೈಹಿಕ ಪರಿಶ್ರಮವಿಲ್ಲದ ದೈನಂದಿನ ಜೀವನ, ಅತೀ ಒತ್ತಡದ ಜೀವನಶೈಲಿ ಮತ್ತು ಧೂಮಪಾನ, ಮದ್ಯಪಾನಗಳಿಂದ ಕೂಡಿದ ಸೋಮಾರಿ ಆಲಸ್ಯ ಜೀವನಶೈಲಿಗಳೇ ಈ ರೋಗಕ್ಕೆ ಮೂಲಕಾರಣವಾಗಿದೆ. 

ಅತೀ ಸುಲಭವಾಗಿ ತಡೆಗಟ್ಟಬಹುದಾದ ಮತ್ತು ನಿಯಂತ್ರಿಸಬಹುದಾದ ರೋಗ ಇದಾಗಿದ್ದರೂ, ಮುಂದುವರಿದ ರಾಷ್ಟ್ರಗಳಲ್ಲಿ ಈ ‘ಸೈಲಂಟ್ ಕಿಲ್ಲರ್’ ರೋಗ ‘ಜೈಂಟ್ ಕಿಲ್ಲರ್’ ಆಗಿ ಹೊರ ಹೊಮ್ಮಿರುವುದು ವಿಷಾದನೀಯ ಸಂಗತಿ. ಮೊದಲೆಲ್ಲಾ ಇಳಿ ವಯಸ್ಸಿನಲ್ಲಿ ಕಾಡುತ್ತಿರುವ ಈ ರೋಗ, ಈಗೀಗ ಮೂವತ್ತರ ಆಸುಪಾಸಿನಲ್ಲಿ ಕಂಡು ಬರುತ್ತಿರುವುದು ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ವಾತಾವರಣವೇ ಇದಕ್ಕೆ ನೇರ ಕಾರಣ ಎಂದು ಸಾಬೀತಾಗಿದೆ. ನಿರಂತರವಾದ ತಲೆನೋವು, ಉಸಿರಾಟವಾಡುವಾಗ ಕಷ್ಟವಾಗುವುದು, ತಲೆ ಸುತ್ತಿದಂತಾಗುವುದು, ಎದೆ ನೋವು, ಎದೆ ಬಡಿತದ ಅರಿವು ಉಂಟಾಗುವುದು ಇವೆಲ್ಲವೂ ಹೆಚ್ಚಾಗುತ್ತಿರುವ ರಕ್ತದ ಒತ್ತಡದ ಸಾಮಾನ್ಯ ಲಕ್ಷಣಗಳು. 

ಸಾಮಾನ್ಯ ಮನುಷ್ಯರಿಗೆ ರಕ್ತದೊತ್ತಡ 120/80 (ಪಾದರಸದ ಎತ್ತರ) ಎಂದು ನಮಗೆಲ್ಲಾ ತಿಳಿದಿದೆ. ಆದರೆ ಇದೊಂದು ನಿರ್ದಿಷ್ಟ ಸಂಖ್ಯೆ ಆಗಿರದೆ ವ್ಯಕ್ತಿಯ ವಯಸ್ಸಿಗನುಗುಣವಾಗಿ ಒಂದಷ್ಟು ಹೆಚ್ಚು ಅಥವಾ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಉದಾಹರಣೆ 30ರ ವಯಸ್ಸಿನಲ್ಲಿ 120/80 ಇದ್ದಲ್ಲಿ, 50ರ ವಯಸ್ಸಿನಲ್ಲಿ 140/90ನ್ನು ಸಹಜ ಎಂದು ತಿಳಿಯಲಾಗುತ್ತದೆ. ಒಟ್ಟಿನಲ್ಲಿ ವ್ಯಕ್ತಿಯ ವಯಸ್ಸು ಮತ್ತು ದೇಹ ಪ್ರಕೃತಿಯನ್ನು ನಿರ್ಧರಿಸಿ ವೈದ್ಯರೇ ರೋಗ ನಿರ್ಣಯ ಮಾಡುತ್ತಾರೆ.

►►ಅಧಿಕ ರಕ್ತದೊತ್ತಡದ ತೊಂದರೆಗಳೇನು?

► ಅತಿಯಾದ ರಕ್ತದೊತ್ತಡದಿಂದಾಗಿ ರಕ್ತನಾಳಗಳು ಪೆಡಸು ಗೊಂಡು ಹೃದಯಾಘಾತ ಮತ್ತು ಸ್ಟ್ರೋಕ್ (ಮೆದುಳಿನ ಆಘಾತ) ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

► ಅತಿಯಾದ ರಕ್ತದೊತ್ತಡ ದಿಂದ ರಕ್ತನಾಳಗಳು ತನ್ನಿಂತಾನೇ ಒಡೆದುಕೊಂಡು ಮಾರಣಾಂತಿಕ ವಾಗುವ ಸಾಧ್ಯತೆಯೂ ಇದೆ.

► ರಕ್ತದೊತ್ತಡ ಹೆಚ್ಚಾದಾಗ, ಹೃದಯವು ಹೆಚ್ಚಿನ ಪರಿಶ್ರಮ ವಹಿಸಿ ರಕ್ತವನ್ನು ಹೃದಯದಿಂದ ಹೊರಹಾಕಬೇಕಾದ ಅನಿವಾರ್ಯತೆ ಇರುತ್ತದೆ. ಇದರಿಂದಾಗಿ ಹೃದಯದ ಗೋಡೆಗಳು ಪೆಡಸುಗೊಂಡು ದಪ್ಪಗಾಗುತ್ತದೆ. ಇದು ಕ್ರಮೇಣ ಹೃದಯದ ವೈಫಲ್ಯಕ್ಕೂ ಕಾರಣವಾಗುತ್ತದೆ.

► ಅತಿಯಾದ ರಕ್ತದೊತ್ತಡ ಕಿಡ್ನಿಗಳ ಕಾರ್ಯಕ್ಷಮತೆ ಯನ್ನು ಕ್ಷೀಣಿಸುತ್ತದೆ.

► ಅಧಿಕ ರಕ್ತದೊತ್ತಡದಿಂದಾಗಿ ಕಣ್ಣಿನ ಒಳಗಿನ ರಕ್ತನಾಳಗಳು ಪೆಡಸಾಗಿ ರಕ್ತದ ಪೂರೈಕೆ ಕುಂಠಿತವಾಗಿ ಅಥವಾ ರಕ್ತನಾಳಗಳು ಒಡೆದುಕೊಂಡು ದೃಷ್ಟಿ ಹೀನತೆಗೆ ಕಾರಣವಾಗುತ್ತದೆ.

► ಅತಿಯಾದ ರಕ್ತದೊತ್ತಡ  ಮೆದುಳಿನ ಕಾರ್ಯಕ್ಷಮತೆ ಯನ್ನು ಕುಗ್ಗಿಸಿ ನೆನಪು ಶಕ್ತಿ ಕುಗ್ಗುವಂತೆ ಮಾಡುತ್ತದೆ. ಅದೇ ರೀತಿ ಮೆದುಳಿನ ರಕ್ತನಾಳಗಳು ಪೆಡಸುಗೊಂಡು ಮರೆಗುಳಿತನಕ್ಕೂ ಕಾರಣವಾಗುತ್ತದೆ.

►►ತಡೆಗಟ್ಟುವುದು ಹೇಗೆ?

►ನಿರಂತರವಾದ ದೈಹಿಕ ವ್ಯಾಯಾಮ ಗಳಾದ ಬಿರುಸು ನಡಿಗೆ, ಸೈಕ್ಲಿಂಗ್ ಮತ್ತು ಈಜುವುದರಿಂದ ಹೃದಯದ ಸಾಮರ್ಥ್ಯ ಮತ್ತು ಸ್ನಾಯಗಳು ಶಕ್ತಿಯುತವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

►ಪೋಷಕಾಂಶಯುಕ್ತ ಸಮತೋಲಿತ ಆಹಾರ ಸೇವನೆ ಮಾಡತಕ್ಕದ್ದು. ಪ್ರೊಟೀನ್, ಶರ್ಕರಪಿಷ್ಠ, ಕೊಬ್ಬು, ವಿಟಮಿನ್, ಖನಿಜಾಂಶ ಮತ್ತು ಲವಣಗಳಿರುವ ಪರಿಪೂರ್ಣ ಆಹಾರ ಸೇವನೆ ಅತೀ ಅಗತ್ಯ.

►ದಿನವೊಂದರಲ್ಲಿ ಕನಿಷ್ಠ 10ರಿಂದ 12 ಗ್ಲಾಸು ನೀರು ಸೇವನೆ ಅತೀ ಅಗತ್ಯ. (2ರಿಂದ 3 ಲೀಟರ್)

►ಕೆಫೇನ್ಯುಕ್ತ ಕೃತಕ ಪೇಯಗಳು ಮತ್ತಷ್ಟು ನಿರ್ಜಲೀಕರಣಕ್ಕೆ ಕಾರಣವಾಗಿ ರಕ್ತದೊತ್ತಡ ಹೆಚ್ಚಿಸುತ್ತದೆ. ಅತಿಯಾದ ಕಾಫಿ, ಟೀ ಸೇವನೆ ಮಾಡಬಾರದು.

►ಮದ್ಯಪಾನ ಮತ್ತು ಧೂಮಪಾನ ಸಂಪೂರ್ಣವಾಗಿ ವರ್ಜಿಸತಕ್ಕದ್ದು.

►ಉಪ್ಪಿನ ಅಂಶವನ್ನು ಕಡಿತಗೊಳಿಸ ಬೇಕು. ದಿನವೊಂದಕ್ಕೆ 5 ಗ್ರಾಂಗಿಂತ ಜಾಸ್ತಿ ಉಪ್ಪು ಸೇವಿಸಬಾರದು.

►ಕೆಲಸದ ವಾತಾವರಣದಲ್ಲಿ ವಿಪರೀತ ಒತ್ತಡ, ಪೈಪೋಟಿಗೆ ಒಡ್ಡಿಕೊಳ್ಳಬಾರದು. ಮನಸ್ಸಿಗೆ ನೆಮ್ಮದಿ ಇರುವ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

►ನಿಮಗಿಷ್ಟವಾದ ಮನಸ್ಸಿಗೆ ಮುದ ನೀಡುವ ಹವ್ಯಾಸಗಳಾದ ಧ್ಯಾನ, ಹಾಡುಗಾರಿಕೆ, ಓದುವುದು, ಸಂಗೀತ ಕೇಳುವುದು ಮುಂತಾದವುಗಳಿಂದ ಮನಸ್ಸಿಗೆ ನೆಮ್ಮದಿ ದೊರಕಿ ರಕ್ತದೊತ್ತಡ ಹತೋಟಿಗೆ ಬರುತ್ತದೆ.

share
ಡಾ. ಮುರಲೀ ಮೋಹನ್, ಚೂಂತಾರು
ಡಾ. ಮುರಲೀ ಮೋಹನ್, ಚೂಂತಾರು
Next Story
X