ಹಿರಿಯ ವಕೀಲ, AIMPLB ಕಾರ್ಯದರ್ಶಿ ಝಫರ್ಯಾಬ್ ಜೀಲಾನಿ ನಿಧನ
ಹೊಸದಿಲ್ಲಿ: ಹಿರಿಯ ವಕೀಲ ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಕಾರ್ಯದರ್ಶಿ ಝಫರ್ಯಾಬ್ ಜೀಲಾನಿ (73 ವರ್ಷ) ಅವರು ಲಕ್ನೋದಲ್ಲಿ ಇಂದು ನಿಧನರಾದರು.
ಜೀಲಾನಿ ಅವರು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕರಾಗಿ ಹಿರಿಯ ವಕೀಲ ಜಿಲಾನಿ ಅವರು ರಾಮಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.
ಈ ಹಿಂದೆ ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.
Next Story