ದುಬೈ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಅಭೂತ ಪೂರ್ವ ಗೆಲುವು; ಸಂಭ್ರಮಾಚರಿಸಿದ ಕಾಂಗ್ರೆಸ್ ಕಾರ್ಯಕರ್ತರು
ದುಬೈ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕರ್ನಾಟಕದಲ್ಲಿ ಅಭೂತ ಪೂರ್ವ ಗೆಲುವು ಹಾಗೂ ಉಳ್ಳಾಲದಲ್ಲಿ ಯು.ಟಿ ಖಾದರ್ ಭರ್ಜರಿ ಮತಗಳಲ್ಲಿ ಜಯಗಳಿಸಿದ ವಿಜಯೋತ್ಸವವನ್ನು ಕರ್ನಾಟಕ, ಹಾಗೂ ಕೇರಳ ಕಾಂಗ್ರೆಸ್ ಕಾರ್ಯಕರ್ತರು ದುಬೈನಲ್ಲಿ ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ EP ಜಾನ್ಸನ್, Incas ದುಬೈ ಕಾರ್ಯದರ್ಶಿ ಸಾದಿಕ್ ಅಲಿ, ರಿಫಾಯಿ ಗೂನಡ್ಕ, ಕೆ.ಸಿ.ಎಫ್ ದುಬೈ ಗ್ಲೋಬಲ್ ಯೂನಿಟ್ ನ ಅಧ್ಯಕ್ಷ ಹಾಜಿ ಶುಕೂರ್ ಉಳ್ಳಾಲ, ಹಮೀದ್ ಗದ್ದಿಗೆ, ಮಜೀದ್ ಮಂಜನಾಡಿ, ಕಲಂದರ್ ಕಬಕ, ಲತೀಫ್ ತಿಂಗಳಾಡಿ, ಅಬ್ದುಲ್ ರಝಾಖ್ ಬುಸ್ತಾನಿ, ನೂರುದ್ದೀನ್ ಪಟೇಲ್ ಉಪಸ್ಥಿತರಿದ್ದರು.
ಮಾನ್ಯ ಶ್ರೀ ಯು.ಟಿ ಖಾದರ್ ರವರಿಗೆ ಕರ್ನಾಟಕದ ಉಪ ಮುಖ್ಯ ಮಂತ್ರಿ ಅಥವಾ ಗ್ರಹ ಮಂತ್ರಿ ಹುದ್ದೆ ದೊರಕಲಿ ಎಂದು ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
Next Story