Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೇಶದಲ್ಲಿ ನಿರುದ್ಯೋಗ ಇಲ್ಲ; ಸ್ವೀಪರ್,...

ದೇಶದಲ್ಲಿ ನಿರುದ್ಯೋಗ ಇಲ್ಲ; ಸ್ವೀಪರ್, ಸೆಕ್ಯೂರಿಟಿ ಗಾರ್ಡ್ ಗಳಾಗಿ ಜನರಿಗೆ ಕೆಲಸ ಸಿಗುತ್ತಿದೆ ಎಂದ ಬಿಜೆಪಿ ಸಂಸದ

17 May 2023 6:37 PM IST
share
ದೇಶದಲ್ಲಿ ನಿರುದ್ಯೋಗ ಇಲ್ಲ; ಸ್ವೀಪರ್, ಸೆಕ್ಯೂರಿಟಿ ಗಾರ್ಡ್ ಗಳಾಗಿ ಜನರಿಗೆ ಕೆಲಸ ಸಿಗುತ್ತಿದೆ ಎಂದ ಬಿಜೆಪಿ ಸಂಸದ

ರಾಜಕೋಟ್(ಗುಜರಾತ್): ದೇಶಾದ್ಯಂತ ಶಾಪಿಂಗ್ ಮಾಲ್ ಗಳು ಮತ್ತು ಚಿತ್ರಮಂದಿರಗಳಲ್ಲಿ ಸ್ವೀಪರ್, ಸೆಕ್ಯೂರಿಟಿ ಗಾರ್ಡ್ ಮತ್ತು ಪ್ಲಂಬರ್ ಇತ್ಯಾದಿ ಹುದ್ದೆಗಳಿಗೆ ಜನರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿಲ್ಲ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಮ ಮೋಕಾರಿಯಾ ಅವರು ಹೇಳಿದ್ದಾರೆ.

ಇಲ್ಲಿಯ ಹೇಮಿ ಗಡವಿ ಸಭಾಂಗಣದಲ್ಲಿ ಕೇಂದ್ರ ಸರಕಾರವು ಮಂಗಳವಾರ ಆಯೋಜಿಸಿದ್ದ ರೋಜಗಾರ್ ಮೇಲಾದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮೋಕಾರಿಯಾ ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ  ಕೊರತೆಯ ಕುರಿತ ವರದಿಯೊಂದನ್ನು ಉಲ್ಲೇಖಿಸಿ, ಯಾರಾದರೂ ಉದ್ಯೋಗದ ಕುರಿತು ಮಾತನಾಡುವಾಗ ಸಾಮಾನ್ಯವಾಗಿ ಸರಕಾರಿ ಹುದ್ದೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿರುತ್ತಾರೆ. ಜನರು ಉದ್ಯೋಗಾವಕಾಶಗಳ ಬಗ್ಗೆ ದೂರುತ್ತಿದ್ದರೆ ವಾಸ್ತವದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಮಿಕರಿಲ್ಲ. ಏಕೆಂದರೆ ಕಳೆದ 10 ವರ್ಷಗಳಲ್ಲಿ ಹಲವಾರು ಮಾಲ್ ಗಳು ಆರಂಭಗೊಂಡಿವೆ ಮತ್ತು ಸ್ವೀಪರ್ಗಳು ಮತ್ತು ಸೆಕ್ಯೂರಿಟಿ ಗಾರ್ಡ್ಗಳಾಗಿ ಜನರನ್ನು ನೇಮಕ ಮಾಡಿಕೊಂಡಿವೆ. ವಾಸ್ತವದಲ್ಲಿ ಹೊಸ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಿವೆ ಮತ್ತು ಸ್ವಚ್ಛತಾ ಕಾರ್ಯಕ್ಕಾಗಿ ಅಥವಾ ಭದ್ರತೆಯನ್ನು ನೋಡಿಕೊಳ್ಳಲು ಜನರ ಅಗತ್ಯವಿದೆ ಎಂದು ಹೇಳಿದರು.

ವಿರೋಧ ಪಕ್ಷಗಳನ್ನು,ವಿಶೇಷವಾಗಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸಿದ ಅವರು,ದೇಶದಲ್ಲಿ ನಿರುದ್ಯೋಗವಿಲ್ಲ,ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಅಂಕಿಸಂಖ್ಯೆಗಳನ್ನು ಉತ್ಪ್ರೇಕ್ಷಿಸುತ್ತಿವೆ. ಎನ್ಜಿಒಗಳು ಈ ಬಗ್ಗೆ ರಿಯಾಲಿಟಿ ಚೆಕ್ಗಳನ್ನು ನಡೆಸಬೇಕು. ಉದಾಹರಣೆಗೆ ರಾಜಕೋಟ್ ನಲ್ಲಿ ಎಷ್ಟು ಮಾಲ್ಗಳು ಆರಂಭಗೊಂಡಿವೆ ಮತ್ತು ಅವುಗಳಲ್ಲಿ ಎಷ್ಟು ಸ್ವೀಪರ್ಗಳು ಮತ್ತು ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಿಕೊಳ್ಳಲಾಗಿದೆ ಎನ್ನುವುದನ್ನು ಅವು ಪರಿಶೀಲಿಸಬೇಕು ಎಂದರು.

ಎಷ್ಟು ಚಿತ್ರಮಂದಿರಗಳು ಆರಂಭಗೊಂಡಿವೆ ಮತ್ತು ಅವುಗಳಲ್ಲಿ ಎಷ್ಟು ಜನರು ಉದ್ಯೋಗಗಳನ್ನು ಪಡೆದಿದ್ದಾರೆ ಎನ್ನುವುದನ್ನೂ ಎನ್ಜಿಒಗಳು ಪರಿಶೀಲಿಸಬೇಕು. ಈ ಎಲ್ಲ ಜನರು ಎಲ್ಲಿಂದ ಬರುತ್ತಾರೆ? ಅವರು ದೇಶದ ವಿವಿಧ ಭಾಗಗಳು ಮತ್ತು ಗುಜರಾತಿನಿಂದ ಬಂದವರು ಎಂದರು.

‘ನಾವು ಉತ್ತರ ಪ್ರದೇಶದಿಂದ ಜನರನ್ನು ತರಬೇಕಾಗಿದೆ. ಈಗ ಬುಡಕಟ್ಟು ಜನರು ನಮ್ಮ ಭೂಮಿಗಳಲ್ಲಿ ಕೃಷಿ ಮಾಡುತ್ತಿದ್ದಾರೆ,ಏಕೆಂದರೆ ನಮ್ಮ ರೈತರು ತಮ್ಮ ಭೂಮಿಗಳಲ್ಲಿ ಸ್ವತಃ ಸಾಗುವಳಿ ಮಾಡುತ್ತಿಲ್ಲ’ ಎಂದ ಮೋಕಾರಿಯಾ,‘ನಾನು 300 ಬಿಘಾ ಕೃಷಿ ಭೂಮಿಯನ್ನು ಹೊಂದಿದ್ದೇನೆ,ಆದರೆ ನಾನಾಗಲಿ ನನ್ನ ಕುಟುಂಬದ ಸದಸ್ಯರಾಗಲಿ ಕೃಷಿಯಲ್ಲಿ ತೊಡಗಿಕೊಂಡಿಲ್ಲ. ಕೆಲಸಕ್ಕಾಗಿ ನಾವು ಕಾರ್ಮಿಕರಿಗೆ ವೇತನವನ್ನು ನೀಡುತ್ತಿದ್ದೇವೆ’ ಎಂದರು. ಸುಮಾರು 7,000 ಉದ್ಯೋಗಿಗಳನ್ನು ಹೊಂದಿರುವ ಕೊರಿಯರ್ ಸಂಸ್ಥೆಯ ಮಾಲಕರಾಗಿರುವ ಮೋಕಾರಿಯಾ,ರಿಯಲ್ ಎಸ್ಟೇಟ್ ಅಭಿವೃದ್ಧಿ ಉದ್ಯಮಿಯೂ ಆಗಿದ್ದಾರೆ.

‘ಯಾರಿಗಾದರೂ ಕೆಲಸ ಬೇಕಿದ್ದರೆ ಅವರು ಅದನ್ನು ಹುಡುಕಿಕೊಳ್ಳುತ್ತಾರೆ. ಕೆಲವರು ಕಚೇರಿ ಉದ್ಯೋಗಗಳು ಮಾತ್ರ ಬೇಕು ಎನ್ನುವುದು ಬೇರೆ ವಿಷಯ. ಇಲ್ಲದಿದ್ದರೆ ಪ್ಲಂಬರ್ಸ್ ಇತ್ಯಾದಿ ವೃತ್ತಿಯವರ ಅಗತ್ಯವಿದೆ. ಎಷ್ಟೆಲ್ಲ ಹೊಸ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ ಮತ್ತು ಅಲ್ಲೆಲ್ಲ ಇಂತಹವರ ಅಗತ್ಯವಿದೆ. ಆದರೆ ನಾವು ವೈಟ್ ಕಾಲರ್ ಉದ್ಯೋಗಗಳನ್ನು ಮಾತ್ರ ಇಷ್ಟಪಡುತ್ತೇವೆ. ನೀವು ನುರಿತ ಕಾರ್ಮಿಕ,ಪ್ಲಂಬರ್ ಇತ್ಯಾದಿಗಳಾಗಿದ್ದರೆ ನಿಮಗೆ ಬಹಳಷ್ಟು ಕೆಲಸ ಸಿಗುತ್ತದೆ ಮತ್ತು ವೇತನವೂ ಒಳ್ಳೆಯದಿರುತ್ತದೆ ’ ಎಂದರು.

share
Next Story
X