ಕುಂದಾಪುರ: ಎಸ್‌ಡಿಎಂಸಿ ಸಮನ್ವಯ ವೇದಿಕೆ ಸಂಸ್ಥಾಪನಾ ದಿನಾಚರಣೆ

ಕುಂದಾಪುರ: ಸರಕಾರಿ ಶಾಲೆಗಳು ವಿದ್ಯೆಯ ಜೊತೆಗೆ ಜೀವನದ ಪಾಠ ಕಲಿಸುವ ಸರ್ವಧರ್ಮಗಳ ದೇವಾಲಯ. ಸಮಾನವಾಗಿ ಕುಳಿತು ಕಲಿತು, ನಲಿದು ಜೀವನ ರೂಪಿಸುವ ತಾಯಿಯ ಮಡಿಲು. ಇಂತಹ ಸರಕಾರಿ ಶಾಲೆಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಎಸ್ಡಿಎಂಸಿ ಸಮನ್ವಯ ವೇದಿಕೆಯ ಎಲ್ಲಾ ಸದಸ್ಯರು ನಿಸ್ವಾರ್ಥ ಸೇವೆಯಿಂದ ತಾವು ಕಲಿತ ಸರಕಾರಿ ಶಾಲೆಗಳ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಶಿಕ್ಷಣ ಪ್ರೇಮಿ ಹಾಗೂ ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆಗಳ ಅಭಿವೃದ್ಧಿಯ ಹರಿಕಾರ, ಗೀತಾ ಎಚ್ಎಸ್ಎನ್ ಫೌಂಡೇಶನ್ ಅಧ್ಯಕ್ಷ ಶಂಕರ್ ಐತಾಳ್ ಹೇಳಿದ್ದಾರೆ.
ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸರಕಾರಿ ಶಾಲೆಗಳ ಎಸ್ಡಿಎಂಸಿ ಸಮಿತಿಗಳ 22ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕು. ಎಸ್ಡಿಎಂಸಿ ಸದಸ್ಯರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯದ ಅಧಿಕಾರ ತಿಳಿಸಿ ಕೊಡುವುದರ ಮೂಲಕ ಗ್ರಾಪಂ ಮಟ್ಟದಲ್ಲಿ ಸಂಘಟಿತರಾಗುವುದು ಹೆಮ್ಮೆ ವಿಚಾರ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ‘ಸರಕಾರಿ ಶಾಲೆ ಅಭಿವೃದ್ಧಿ ಸಾಧಕರು’ ಪ್ರಶಸ್ತಿಗೆ ಆಯ್ಕೆಯಾದ ಪ್ರಕಾಶ್ ಆಚಾರ್ಯ ಬಗ್ವಾಡಿ ಅವರನ್ನು ಸನ್ಮಾನಿಸಲಾಯಿತು.
ಎಸ್ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರು, ಉದ್ಯಮಿ ಗಳು ಆದ ಶೇಕ್ ಫರೀದ್ ಭಾಷಾ ಸಾಹೇಬ್ ಅವರು ಮಕ್ಕಳ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಇತ್ತೀಚಿಗೆ ಆಕಸ್ಮಿಕವಾಗಿ ನಿಧನ ಹೊಂದಿದ ಸಮನ್ವಯ ವೇದಿಕೆಯ ಕ್ರಿಯಾಶೀಲ ಸದಸ್ಯ ರಫೀಕ್ ಕೋಡಿ ಇವರ ಆತ್ಮಕ್ಕೆ ಶಾಂತಿಯನ್ನು ಕೋರಿ ಪುಷ್ಪ ನಮನವನ್ನು ಸಲ್ಲಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ ಕುಮಾರ್, ಸಮನ್ವಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್, ಕಾರ್ಕಳ ತಾಲೂಕು ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ.ನಾಗರಾಜ್, ಕಾರ್ಯದರ್ಶಿ ಪ್ರಮೋದ ಕೆ. ಶೆಟ್ಟಿ, ಕುಂದಾಪುರ ಪುರಸಭೆ ಘಟಕದ ಅಧ್ಯಕ್ಷ ಅಶ್ವತ್ ಕುಮಾರ್, ಬೈಂದೂರು ತಾಲೂಕು ಅಧ್ಯಕ್ಷ ಅವನೀಶ ಹೊಳ್ಳ, ಕಾರ್ಯದರ್ಶಿ ಜ್ಯೋತಿ ಜೆ. ಶೆಟ್ಟಿ , ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಉಪಾಧ್ಯಕ್ಷ ವಿಶ್ವನಾಥ ಬೆಳ್ಳಂಪಳ್ಳಿ, ಉದ್ಯಮಿ ಮೊಹಮ್ಮದ್ ನಿಸ್ಸಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೇದಿಕೆ ಪದಾಧಿಕಾರಿಗಳಾದ ಸಾಧಿಕ್ ಮಾವಿನಕಟ್ಟೆ, ರಾಜೇಶ್ ಕೋಣಿ, ಜಿ.ಎಂ.ಅಝೀಝ್, ರಾಜಶೇಖರ್, ರಮ್ಯಾ ದಯಾನಂದ್, ಗೀತಾ ಕೋಟೇಶ್ವರ, ಆಶಾ ಕೋಟೇಶ್ವರ, ದೀಪಿಕಾ ಕುಂಭಾಶಿ, ಅಶ್ಪಾಕ್, ಪವಿತ್ರ ಬಳ್ಕೂರು, ಹೇಮಾ ಬಿಜಾಡಿ, ಲಕ್ಷ್ಮಿ ಚಿತ್ತೂರು, ರೇಖಾ ಗಣೇಶ್, ದೀಪಾ ಕುಂದಾಪುರ, ಶೋಭಾ ಶಾಂತರಾಜ್, ಜ್ಯೋತಿ ಟಿ .ಟಿ ರೋಡ್, ರಾಧಿಕಾ ಶಾನುಭಾಗ್, ಕೃಷ್ಣಾನಂದ ಶಾನುಭಾಗ್, ಜ್ಯೋತಿ ಹಕ್ಲಾಡಿ, ಶಮೀಮ್ ಶಿರೂರು, ವಿನೋದ ಶೆಟ್ಟಿ, ರೆಹನಾ ಬಾನು ಭಾಗವಹಿಸಿದ್ದರು.
ಎಸ್.ವಿ ನಾಗರಾಜ್ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ವರದ ಸುಧಾಕರ್ ಆಚಾರ್ಯ ವಂದಿಸಿದರು, ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.







