ಮುಂದಿನ 5 ವರ್ಷ ಗರಿಷ್ಟ ತಾಪಮಾನ ವಿಶ್ವಸಂಸ್ಥೆ ಎಚ್ಚರಿಕೆ

ವಿಶ್ವಸಂಸ್ಥೆ, ಮೇ 17: ಹಸಿರುಮನೆ ಅನಿಲ ಹೊರಸೂಸುವಿಕೆ ಮತ್ತು ಎಲ್‍ನಿನೊ ಸೇರಿ ತಾಪಮಾನವನ್ನು ಹೆಚ್ಚಿಸುವುದರಿಂದ 2023ರಿಂದ 2027 ಅವಧಿಯು ಇದುವರೆಗೆ ದಾಖಲಾಗಿರುವ ಅತ್ಯಂತ ಬೆಚ್ಚಗಿನ 5 ವರ್ಷಗಳ ಅವಧಿಯಾಗಿರಲಿದೆ ಎಂದು ವಿಶ್ವಸಂಸ್ಥೆ ಬುಧವಾರ ಎಚ್ಚರಿಸಿದೆ.
ಜಾಗತಿಕ ಹವಾಮಾನವು ಶೀಘ್ರದಲ್ಲೇ ಪ್ಯಾರಿಸ್ ಹವಾಮಾನ ಒಪ್ಪಂದಗಳಲ್ಲಿ ನಿಗದಿಪಡಿಸಲಾದ ಹೆಚ್ಚು ಮಹಾತ್ವಾಕಾಂಕ್ಷೆಯ ಗುರಿಗಳನ್ನು ಮೀರಲಿದೆ. ಮುಂದಿನ 5 ವರ್ಷಗಳಲ್ಲಿ ಇದು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.
2015ರಿಂದ 2022 ಇದುವರೆಗಿನ ಅತ್ಯಂತ ಗರಿಷ್ಟ ತಾಪಮಾನದ ಅವಧಿಯೆಂದು ದಾಖಲೆ ಬರೆದಿತ್ತು. ಆದರೆ ಹವಾಮಾನ ಬದಲಾವಣೆ ವೇಗಗೊಂಡಿರುವುದರಿಂದ ತಾಪಮಾನ ಇನ್ನಷ್ಟು ಅಧಿಕಗೊಳ್ಳುವ ಸಾಧ್ಯತೆಯಿದೆ. ಮುಂದಿನ 5 ವರ್ಷಗಳಲ್ಲಿ ಒಂದು ವರ್ಷ ಅಥವಾ ಸಂಪೂರ್ಣ ಐದು ವರ್ಷಗಳು ಅತ್ಯಧಿಕ ತಾಪಮಾನದ ಅವಧಿ ಎಂದು ದಾಖಲೆಗೆ ಸೇರುವ ಸಾಧ್ಯತೆ 98%ದಷ್ಟಿದೆ ಎಂದು ಸಂಸ್ಥೆ ಹೇಳಿದೆ.
Next Story