ಆರೆಸ್ಸೆಸ್ ಉಪಕುಲಪತಿಗಳ ನೇಮಕಾತಿ ಸ್ವಜನಪಕ್ಷಪಾತಕ್ಕೆ ಅತ್ಯುತ್ತಮ ಉದಾಹರಣೆ: ಪ್ರಧಾನಿಗೆ ಕಪಿಲ್ ಸಿಬಲ್ ತಿರುಗೇಟು
ಹೊಸದಿಲ್ಲಿ, ಮೇ 17: ನೇಮಕಾತಿ ವ್ಯವಸ್ಥೆಯಲ್ಲಿ ತನ್ನ ಸರಕಾರ ತಂದಿರುವ ಬದಲಾವಣೆಗಳು ಸ್ವಜನ ಪಕ್ಷಪಾತವನ್ನು ಕೊನೆಗೊಳಿಸಿವೆ ಎಂಬ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಯನ್ನು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಬುಧವಾರ ವ್ಯಂಗ್ಯವಾಡಿದ್ದಾರೆ. ವಿಶ್ವವಿದ್ಯಾನಿಲಯಗಳಿಗೆ ಆರೆಸ್ಸೆಸ್ ಮತ್ತು ಆರೆಸ್ಸೆಸ್ ಮನೋಸ್ಥಿತಿಯ ಉಪಕುಲಪತಿಗಳು ಮತ್ತು ಇಂಥದೇ ಮನೋಸ್ಥಿತಿಯ ಶಿಕ್ಷಕರನ್ನು ನೇಮಿಸಿರುವುದು ‘‘ಸ್ವಜನ ಪಕ್ಷಪಾತದ ಶ್ರೇಷ್ಠ ಉದಾಹರಣೆ’’ಗಳಾಗಿವೆ ಎಂದು ಅವರು ಹೇಳಿದ್ದಾರೆ.
‘‘ನೇಮಕಾತಿ ಪ್ರಕ್ರಿಯೆಯಲ್ಲಿ ಮಾಡಲಾಗಿರುವ ಬದಲಾವಣೆಗಳು ಭ್ರಷ್ಟಾಚಾರ, ಸ್ವಜನ ಪಕ್ಷಪಾತವನ್ನು ಕೊನೆಗೊಳಿಸಿವೆ ಎಂದು ಪ್ರಧಾನಿ ಹೇಳಿದ್ದಾರೆ. ಅಭಿನಂದನೆಗಳು. ಆದರೆ, ವಿಶ್ವವಿದ್ಯಾನಿಲಯಗಳಲ್ಲಿ ಆರ್‌ಎಸ್‌ಎಸ್ ಮತ್ತು ಆರೆಸ್ಸೆಸ್ ಮನೋಸ್ಥಿತಿಯ ಉಪಕುಲಪತಿಗಳ ನೇಮಕಾತಿ ಹಾಗೂ ಇಂಥದೇ ಮನೋಸ್ಥಿತಿಯ ಶಿಕ್ಷಕರ ನೇಮಕಾತಿಯು ಸ್ವಜನ ಪಕ್ಷಪಾತಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಇದಕ್ಕೆ ನೀವು ಏನು ಹೇಳುತ್ತೀರಿ ಪ್ರಧಾನಿಯವರೇ!’’ ಎಂಬುದಾಗಿ ಸಿಬಲ್ ಟ್ವೀಟ್ ಮಾಡಿದ್ದಾರೆ.
Next Story