ಹಿಂದೂಜ ಸಮೂಹದ ಅಧ್ಯಕ್ಷ ಶ್ರೀಚಂದ್ ಹಿಂದೂಜ ನಿಧನ

ಹೊಸದಿಲ್ಲಿ, ಮೇ 17: ನಾಲ್ವರು ಹಿಂದೂಜ ಸಹೋದರರ ಪೈಕಿ ಹಿರಿಯ ಹಾಗೂ ಹಿಂದೂಜ ಸಮೂಹದ ಅಧ್ಯಕ್ಷ ಶ್ರೀಚಂದ್ ಪರಮಾನಂದ ಹಿಂದೂಜ ಲಂಡನ್‌ನಲ್ಲಿ ಬುಧವಾರ ನಿಧನರಾದರು. ಅವರಿಗೆ 87 ವರ್ಷ ಆಗಿತ್ತು. ಸ್ವಲ್ಪ ಸಮಯದಿಂದ ಅವರು ಅಸೌಖ್ಯದಿಂದಿದ್ದರು. ಅವರು ಬ್ರಿಟಿಶ್ ರಾಷ್ಟ್ರೀಯರಾಗಿದ್ದರು.
ಸ್ವೀಡನ್‌ನ ಬಂದೂಕು ತಯಾರಿಕಾ ಕಂಪೆನಿ ಎಬಿ ಬೊಫೋರ್ಸ್ ಭಾರತ ಸರಕಾರದ ಗುತ್ತಿಗೆಯೊಂದನ್ನು ಪಡೆಯುವುದಕ್ಕೆ ನೆರವಾಗಲು ಶ್ರೀಚಂದ್ ಮತ್ತು ಅವರ ಸಹೋದರರಾದ ಗೋಪಿಚಂದ್ ಮತ್ತು ಪ್ರಕಾಶ್ 81 ಮಿಲಿಯ ಸ್ವೀಡಿಶ್ ಕ್ರೋನ (ಸುಮಾರು 64 ಕೋಟಿ ರೂಪಾಯಿ) ವನ್ನು ಅಕ್ರಮ ಕಮಿಶನ್ ರೂಪದಲ್ಲಿ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಬಳಿಕ ನ್ಯಾಯಾಲಯವೊಂದು ಅವರನ್ನು ದೋಷಮುಕ್ತೊಳಿಸಿದೆ.
Next Story