ಚೆನ್ನೈನಲ್ಲಿ ಕೆಟ್ಟು ನಿಂತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ್ದ ರೂ. 535 ಕೋಟಿ ಹೊತ್ತು ಸಾಗುತ್ತಿದ್ದ ಟ್ರಕ್

ಚೆನ್ನೈ: ಚೆನ್ನೈನಿಂದ ವಿಲ್ಲುಪುರಂಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ರೂ. 1,070 ಕೋಟಿಯನ್ನು ಹೊತ್ತು ಸಾಗುತ್ತಿದ್ದ ಎರಡು ಕಂಟೈನರ್ ಟ್ರಕ್‌ಗಳ ಪೈಕಿ ಒಂದು ಟ್ರಕ್ ಚೆನ್ನೈನ ತಾಂಬರಂ ಬಳಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದರಿಂದ ಎರಡೂ ಟ್ರಕ್‌ಗಳು ನಿಲುಗಡೆಗೊಂಡಿವೆ ಎಂದು indiatoday.in ವರದಿ ಮಾಡಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಈ ಟ್ರಕ್‌ಗಳಿಗೆ 17 ಪೊಲೀಸ್ ಅಧಿಕಾರಿಗಳು ಬೆಂಗಾವಲು ಒದಗಿಸಿದ್ದರು.
ರೂ. 535 ಕೋಟಿ ಹೊತ್ತು ಸಾಗುತ್ತಿದ್ದ ಟ್ರಕ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ ಎಂಬ ಸುದ್ದಿ ತಿಳಿದು ಕ್ರೋಮ್‌ಪೇಟ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಂತರ ಹೆಚ್ಚಿನ ಭದ್ರತೆಗಾಗಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಎರಡೂ ಟ್ರಕ್‌ಗಳು ವಿಲ್ಲುಪುರಂ ಜಿಲ್ಲೆಯಲ್ಲಿರುವ ಬ್ಯಾಂಕ್‌ಗಳಿಗೆ ನಗದನ್ನು ಪೂರೈಸಲು ಚೆನ್ನೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಚೇರಿಯಿಂದ ವಿಲ್ಲುಪುರಂಗೆ ಹೊರಟಿದ್ದವು.
ಈ ಪೈಕಿ ಒಂದು ಟ್ರಕ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದರಿಂದ ಭದ್ರತೆಯ ದೃಷ್ಟಿಯಿಂದ ಆ ಟ್ರಕ್ ಅನ್ನು ಚೆನ್ನೈನಲ್ಲಿರುವ ತಂಬರಂನ ರಾಷ್ಟ್ರೀಯ ಸಿದ್ಧ ಸಂಸ್ಥೆಗೆ ಸಾಗಿಸಲಾಯಿತು.
ಕೆಟ್ಟು ನಿಂತಿರುವ ಟ್ರಕ್ ಅನ್ನು ಪತ್ತೆ ಹಚ್ಚಲು ತಂಬರಂನ ಸಹಾಯಕ ಆಯುಕ್ತ ಶ್ರೀನಿವಾಸನ್ ತಂಡದೊಂದಿಗೆ ಸ್ಥಳಕ್ಜೆ ಧಾವಿಸಿದರು. ನಂತರ ಟ್ರಕ್ ಅನ್ನು ರಾಷ್ಟ್ರೀಯ ಸಿದ್ಧ ಸಂಸ್ಥೆಗೆ ಸಾಗಿಸಿ ಅದರ ಗೇಟ್‌ಗಳನ್ನು ಮುಚ್ಚಲಾಯಿತು. ಕೆಲ ದಿನಗಳ ಮಟ್ಟಿಗೆ ವಿಶ್ವವಿದ್ಯಾಲಯದ ಆವರಣ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.
ಟ್ರಕ್ ರಿಪೇರಿಗೆಂದು ಬಂದಿದ್ದ ಮೆಕಾನಿಕ್‌ಗಳು ಅದನ್ನು ರಿಪೇರಿ ಮಾಡಲು ಸಾಧ್ಯವಾಗದ ಕಾರಣ ಅವರನ್ನು ಚೆನ್ನೈನ ರಿಸರ್ವ್ ಬ್ಯಾಂಕ್‌ಗೆ ವಾಪಸ್ ಕಳಿಸಲಾಯಿತು.







