ಹಳಿ ನವೀಕರಣ ಹಿನ್ನೆಲೆ: ರೈಲು ಸಂಚಾರದಲ್ಲಿ ವ್ಯತ್ಯಯ

ಮಂಗಳೂರು, ಮೇ 18: ತಿರುವನಂತಪುರದ ಆಲುವ ಅಂಗಮಾಲಿ ಮಧ್ಯೆ ಹಳಿ ನವೀಕರಣ ಕಾಮಗಾರಿ ನಡೆಯಲಿರುವುದರಿಂದ ಹಲವು ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಮೇ 21ರಂದು ಹೊರಡಲಿರುವ ನಂ.12202 ಕೊಚ್ಚುವೇಲಿ-ಲೋಕಮಾನ್ಯ ತಿಲಕ್ ಗರೀಬರಥ, ಮೇ 22ರಂದು ಹೊರಡಲಿರುವ ನಂ.12201 ಲೋಕಮಾನ್ಯ ತಿಲಕ್-ಕೊಚ್ಚುವೇಲಿ ಗರೀಬರಥ, ಮೇ 21ರಂದು ಹೊರಡಲಿರುವ 16650 ನಾಗರಕೋವಿಲ್- ಮಂಗಳೂರು ಸೆಂಟ್ರಲ್ ಪರಶುರಾಮ ಎಕ್ಸ್‌ಪ್ರೆಸ್, ಮೇ 20ರಂದು ಹೊರಡುವ ನಂ.16649 ಮಂಗಳೂರು ಸೆಂಟ್ರಲ್- ನಾಗರ ಕೋವಿಲ್ ಪರಶುರಾಮ ಎಕ್ಸ್‌ಪ್ರೆಸ್ ಪೂರ್ಣ ರದ್ದಾಗಲಿದೆ.
ಮೇ 21ರಂದು ಹೊರಡುವ ನಂ.12617 ಎರ್ನಾಕುಳಂ ಜಂಕ್ಷನ್ ಹಝ್ರತ್ ನಿಝಾಮುದ್ದೀನ್ ಮಂಗಳಾ ಎಕ್ಸ್‌ಪ್ರೆಸ್ ಎರ್ನಾಕುಳಂ ಹಾಗೂ ತ್ರಿಶೂರು ಮಧ್ಯೆ ಭಾಗಶಃ ರದ್ದಾಗಲಿದೆ. ಮೇ 21ರಂದು ತಿರುವನಂತಪುರಂ ನಿಂದ ಬೆಳಗ್ಗೆ 9:15ಕ್ಕೆ ಹೊರಡಬೇಕಾದ ನಂ. 16346 ತಿರುವನಂತಪುರಂ ಸೆಂಟ್ರಲ್-ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್‌ಪ್ರೆಸ್ 3 ಗಂಟೆ ತಡವಾಗಿ ಅಂದರೆ 12:15ಕ್ಕೆ ಹೊರಡಲಿದೆ.
ಕೊಚ್ಚುವೇಲಿಯಿಂದ ಮೇ 21ರಂದು ಪೂ.11:10ಕ್ಕೆ ಹೊರಡಬೇಕಾದ ನಂ.2909 ಕೊಚ್ಚುವೇಲಿ-ಪೋರಬಂದರ್ ಎಕ್ಸ್‌ಪ್ರೆಸ್ 1:35 ಗಂಟೆ ತಡವಾಗಿ ಅಂದರೆ 12:45ಕ್ಕೆ ಹೊರಡಲಿದೆ. ಮೇ 22ರಂದು ಮಂಗಳೂರು ಸೆಂಟ್ರಲ್ ನಿಂದ ಮಧ್ಯಾಹ್ನ 2:25ಕ್ಕೆ ಹೊರಡಬೇಕಾದ ನಂ. 16348 ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ 4:15ಕ್ಕೆ ತಡವಾಗಿ ಅಂದರೆ ಸಂಜೆ 6:40ಕ್ಕೆ ಹೊರಡಲಿದೆ.
ಮೇ 22ರಂದು ಮಂಗಳೂರು ಸೆಂಟ್ರಲ್‌ನಿಂದ ಸಂಜೆ 5:30ಕ್ಕೆ ಹೊರಡಬೇಕಾದ ನಂ.16603 ಮಂಗಳೂರು ಸೆಂಟ್ರಲ್- ತಿರುವನಂತಪುರಂ ಮಾವೇಲಿ ಎಕ್ಸ್‌ಪ್ರೆಸ್ ರೈಲು ರಾತ್ರಿ 7:45ಕ್ಕೆ ಹೊರಡಲಿದೆ.
ಮೇ 21ರಂದು ನಂ.16331 ಮುಂಬೈ ಸಿಎಸ್‌ಎಂಟಿ-ತಿರುವನಂತಪುರಂ ರೈಲನ್ನು 1:15 ಗಂಟೆ ಕಾಲ, ಮೇ 22ರಂದು ನಂ.16630 ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರೈಲನ್ನು 15 ನಿಮಿಷ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.