ಮಣಿಪಾಲ: ಕೆನರಾ ಬ್ಯಾಂಕಿನ ಸಹಾಯಕ ಪ್ರಬಂಧಕ ಆತ್ಮಹತ್ಯೆ

ಮಣಿಪಾಲ: ಕೆನರಾ ಬ್ಯಾಂಕಿನ ಅಧಿಕಾರಿಯೊಬ್ಬರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮೇ 17ರಂದು ಹೆರ್ಗಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ತೆಲಂಗಾಣ ನಸರುಲ್ಲಾಬಾದ್ ಜಿಲ್ಲೆಯ ನಿಝಾಮಾಬಾದ್ ಗ್ರಾಮದ ಆರ್. ಸಂಪತ ಕುಮಾರ್(33) ಎಂದು ಗುರುತಿಸಲಾಗಿದೆ.
ಮಣಿಪಾಲದ ಕೆನರಾ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಇವರು ಮೇ 16ರಂದು ನಸುಕಿನ ವೇಳೆ 3 ಗಂಟೆಯಿಂದ ಮೇ 17ರ ಮಧ್ಯಾಹ್ನ 1ಗಂಟೆಯ ಮಧ್ಯಾವಧಿಯಲ್ಲಿ ಹೆರ್ಗಾ ಗ್ರಾಮದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story