ಮಂಗಳೂರು: ಮೇ 31ರವರರಗೆ ಜಾನುವಾರುಗಳಿಗೆ ಲಸಿಕೆ

ಮಂಗಳೂರು, ಮೇ 18: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಮೇ 31ರವರೆಗೆ ಜಿಲ್ಲಾದ್ಯಂತ ದನ ಹಾಗೂ ಎಮ್ಮೆಗಳ ಹೆಣ್ಣು ಕರುಗಳಿಗೆ ಉಚಿತವಾಗಿ 2ನೇ ಸುತ್ತಿನ, 2ನೇ ಹಂತದ ಕಂದುರೋಗ (ಬ್ರುಸೆಲ್ಲೋಸಿಸ್) ವಿರುದ್ದ ಲಸಿಕೆ ನೀಡಲಾಗುತ್ತಿದೆ.
ಕಂದುರೋಗವು ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದ್ದು, ಜಾನುವಾರುಗಳಲ್ಲಿ ಜ್ವರ, ಗರ್ಭಪಾತ, ಗರ್ಭಧಾರಣೆ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದು ಪ್ರಾಣಿಜನ್ಯ ರೋಗವಾಗಿದ್ದು, ಮನುಷ್ಯರಿಗೂ ಹರಡಬಹುದಾಗಿದೆ.
ಇದರ ಚಿಕಿತ್ಸೆಯು ದುಬಾರಿ ಮತ್ತು ತ್ರಾಸದಾಯಕವಾಗಿದೆ. ಆದ್ದರಿಂದ ರೈತರು ಸಮೀಪ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ, 4ರಿಂದ 8 ತಿಂಗಳ ವಯಸ್ಸಿನ ಹೆಣ್ಣು ಕರುಗಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story