ಸಿಗರೇಟ್ ಜತೆ ಮಾದಕ ಸೇವನೆ: ಆರೋಪಿ ಸೆರೆ

ಮಂಗಳೂರು, ಮೇ 18: ನಗರದ ಕೊಟ್ಟಾರ ಚೌಕಿಯ ಜೆ.ಬಿ. ಲೋಬೋ ರಸ್ತೆಯಲ್ಲಿ ಸಿಗರೇಟ್ ಜತೆ ಮಾದಕ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಕೊಟ್ಟಾರ ಚೌಕಿಯ ನಿವಾಸಿ ರಿತೇಶ್ ರಾಮನಾಥ ಪೂಜಾರಿ (22) ಎಂಬಾತನನ್ನು ಬಂಧಿಸಲಾಗಿದೆ ಎಂದು ಉರ್ವ ಪೊಲೀಸರು ತಿಳಿಸಿದ್ದಾರೆ.
ಮೇ 17ರಂದು ಸಂಜೆ 6:15ಕ್ಕೆ ಪೊಲೀಸರು ಕರ್ತವ್ಯದಲ್ಲಿದ್ದಾಗ ಉರ್ವ ಸಾರ್ವಜನಿಕ ಗ್ರೌಂಡ್ ಬದಿಯಲ್ಲಿರುವ ನೀರಿನ ತೋಡಿನ ಬಳಿ ಸಂಶಯಾಸ್ಪದ ರೀತಿಯಲ್ಲಿ ಆರೋಪಿ ರಿತೇಶ್ ನಿಂತುಕೊಂಡು ಸಿಗರೇಟನ್ನು ಸೇದುತ್ತಿದ್ದ ಎನ್ನಲಾಗಿದೆ. ಆತನ ಬಳಿ ಹೋಗಿ ವಿಚಾರಿಸಿದಾಗ ಅಸ್ಪಷ್ಟವಾಗಿ ಮಾತನಾಡಿದ್ದು, ಸಂಶಯಗೊಂಡ ಪೊಲೀಸರು ತಕ್ಷಣ ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಅದರಂತೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
Next Story