ಉಡುಪಿ: ಬ್ಯಾಂಕ್ ಖಾತೆಯ ಅಪ್‌ಡೇಟ್ ಹೆಸರಿನಲ್ಲಿ ವಂಚನೆ

ಉಡುಪಿ, ಮೇ 18: ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡುವಂತೆ ನಂಬಿಸಿ ಲಕ್ಷಾಂತರ ರೂ. ಆನ್‌ಲೈನ್ ವರ್ಗಾವಣೆ ಮಾಡಿ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 18ರಂದು ಮಧ್ಯಾಹ್ನ ವೇಳೆ ಪರ್ಕಳದ ಪಿ.ಅಪ್ರಾಯ ಶೆಟ್ಟಿಗಾರ್ ಎಂಬವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಕೆನರಾ ಬ್ಯಾಂಕ್ ಸಿಬ್ಬಂದಿ ಎಂಬುದಾಗಿ ಹೇಳಿಕೊಂಡನು. ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರೀಯ ಗೊಂಡಿದ್ದು, ಕೂಡಲೇ ಕೆ.ವೈ.ಸಿ. ಅಪ್ಡೇಟ್ ಮಾಡಬೇಕು ಎಂಬುದಾಗಿ ತಿಳಿಸಿದನು. ಅದನ್ನು ನಂಬಿದ ಅಪ್ರಾಯ ಶೆಟ್ಟಿಗಾರ್ ಕಾರ್ಡ್ ಸಂಖ್ಯೆ ಮತ್ತು ಓಟಿಪಿ ಸಂಖ್ಯೆ ನೀಡಿದ್ದು, ಇವರ ಖಾತೆಯಿಂದ ಒಟ್ಟು 1,07,000ರೂ. ಹಣ ವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.
Next Story





