ಮಹಿಂದಾ ರಾಜಪಕ್ಸ ವಿರುದ್ಧದ ಪ್ರಯಾಣ ನಿಷೇಧ ರದ್ದು

ಕೊಲಂಬೊ, ಮೇ 18: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸರ ಮೇಲೆ ವಿಧಿಸಲಾಗಿದ್ದ ಪ್ರಯಾಣ ನಿಷೇಧವನ್ನು ಶ್ರೀಲಂಕಾದ ನ್ಯಾಯಾಲಯ ಬುಧವಾರ ರದ್ದುಪಡಿಸಿದೆ ಎಂದು ಶ್ರೀಲಂಕಾದ `ನ್ಯೂಸ್ ಫಸ್ಟ್' ಸುದ್ಧಿಸಂಸ್ಥೆ ವರದಿ ಮಾಡಿದೆ.
2022ರ ಮೇ 9ರಂದು ದೇಶದಲ್ಲಿ ನಡೆದ ಘರ್ಷಣೆಗಳನ್ನು ವಿರೋಧಿಸಿ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಮಹಿಂದಾ ರಾಜಪಕ್ಸ, ಸಂಸದ ರೋಹಿತಾ ಅಬೆಗುಣವರ್ಧನ, ಸಚಿವ ಪವಿತ್ರಾ ವನ್ನಿಯರಚ್ಚಿ, ಮಾಜಿ ಪ್ರಾಂತೀಯ ಸಮಿತಿ ಸದಸ್ಯ ಕಾಂಚನ ಜಯರತ್ನೆ ವಿರುದ್ಧ ಪ್ರಯಾಣ ನಿಷೇಧ ವಿಧಿಸಲಾಗಿತ್ತು.
ಆದರೆ ಇವರ ವಿರುದ್ಧದ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿರುವ ನ್ಯಾಯಾಲಯ ಇವರ ಮೇಲಿದ್ದ ಪ್ರಯಾಣ ನಿಷೇಧವನ್ನು ರದ್ದುಗೊಳಿಸಿದೆ. ಆದರೆ ಸಂಸದ ಮಿಲಾನ್ ಜಯತಿಲಕೆ ಹಾಗೂ ಮತ್ತೊಬ್ಬ ಶಂಕಿತ ಆರೋಪಿಯ ಮೇಲಿದ್ದ ಪ್ರಯಾಣ ನಿಷೇಧ ಜಾರಿಯಲ್ಲಿರುವುದಾಗಿ ನ್ಯಾಯಾಲಯ ಘೋಷಿಸಿದೆ.
Next Story