ತ.ನಾ.: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಇಬ್ಬರು ಸಾವು, ಹಲವರಿಗೆ ಗಾಯ

ವಿರುದ್ಧುನಗರ, ಮೇ 18: ತಮಿಳುನಾಡಿನ ಶಿವಕಾಶಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಹೂಕುಂಡ ಪಟಾಕಿ ತಯಾರಿಸಲು ರಾಸಾಯನಿಕವನ್ನು ತುಂಬಿಸುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.
ಈ ಸ್ಫೋಟದಲ್ಲಿ ಇರುಲಾಯಿ, ಈಯಮ್ಮಲ್, ಸುಂದರರಾಜನ್, ಹಾಗೂ ಕುಮಾರೇಶನ್ ಅವರು ಗಾಯಗೊಂಡರು. ಕೂಡಲೇ ಅವರನ್ನು ಚಿಕಿತ್ಸೆಗೆ ಶಿವಕಾಶಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರಲ್ಲಿ ತೀವ್ರ ಗಾಯಗೊಂಡಿದ್ದ ಕುಮಾರೇಶನ್ ಹಾಗೂ ಸುಂದರರಾಜನ್ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹಾಗೂ ರಕ್ಷಣಾ ಕಾರ್ಯಕರ್ತರ ತಂಡ ಹಲವು ಗಂಟೆಗಳ ಕಾಲ ಹೋರಾಟ ನಡೆಸಿತು. ಘಟನೆ ಕುರಿತಂತೆ ಮರನೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Next Story





