WFI ವರಿಷ್ಠನ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂತ್ರಸ್ತರಿಂದ ಆಡಿಯೊ, ವೀಡಿಯೊ ಪುರಾವೆ ಕೇಳಿದ ತನಿಖಾ ಸಮಿತಿ

ಹೊಸದಿಲ್ಲಿ,ಮೇ 18: ಭಾರತೀಯ ಕುಸ್ತಿ ಫೆಡರೇಶನ್ ವರಿಷ್ಠ (ಡಬ್ಲ್ಯುಎಫ್ಐ) ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕೃತ ಮೇಲ್ವಿಚಾರಣಾ ಸಮಿತಿಯ ಮುಂದೆ ಸಾಕ್ಷ ನೀಡಿರುವ ಕುಸ್ತಿಪಟುಗಳು ಸಮಿತಿಯ ವಿಚಾರಣಾ ಕಲಾಪಗಳ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೆಂಬ ಆರೋಪಗಳ ಕುರಿತು ವಿಡಿಯೋ ಅಥವಾ ಆಡಿಯೋ ಪುರಾವೆಗಳನ್ನು ಒದಗಿಸುವಂತೆ ತಮಗೆ ಸೂಚಿಸಲಾಗಿದೆಯೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಅಸಭ್ಯವಾದ ರೀತಿಯಲ್ಲಿ ಸ್ಪರ್ಶಿಸಿದ್ದಾರೆಂದು ಬ್ರಿಜ್ಭೂಷಣ್ ಸಿಂಗ್ ವಿರುದ್ಧ ತಾನು ಮಾಡಿದ ಆರೋಪವನ್ನು ಸಮಿತಿಯ ಸದಸ್ಯರು ತಳ್ಳಿಹಾಕಿದ್ದಾರೆಂದು ಓರ್ವ ಕುಸ್ತಿಪಟು ತಿಳಿಸಿದ್ದಾ. ಆತ ತಂದೆ ಸಮಾನನಾಗಿರುವುದರಿಂದ ಅವರ ನಡವಳಿಕೆಯನ್ನು ತಪ್ಪಾಗಿ ಆರ್ಥೈಸಲಾಗದೆಂದು ಸಮಜಾಯಿಷಿ ನೀಡಿದರು ಎಂದು ಆಕೆ ತಿಳಿಸಿದ್ದಾರೆ.
ಭಾರತೀಯ ಕ್ರೀಡಾಪ್ರಾಧಿಕಾರದ ಕಾರ್ಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಭಾರತೀಯ ಕುಸ್ತಿ ಫೆಡರೇಶನ್ನ ಸಿಬ್ಬಂದಿ ವರ್ಗ ಹಾಗೂ ಬ್ರಿಜ್ಭೂಷಣ್ ಶರಣ್ಸಿಂಗ್ ಜೊತೆ ನಂಟು ಹೊಂದಿರುವ ಕೋಚ್ ಓರ್ವ ಉಪಸ್ಥಿತರಿದ್ದು, ಅವರು ಬೆದರಿಸುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಕೆಲವು ಕುಸ್ತಿಪಟುಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೇಲ್ವಿಚಾರಣಾ ಸಮಿತಿಯಲ್ಲಿ ಮಹಿಳಾ ಸದಸ್ಯರು ಮಾತ್ರವೇ ಹಾಜರಿರಬೇಕೆಂಬ ಸಂತ್ರಸ್ತರ ಮನವಿಯನ್ನು ತಿರಸ್ಕರಿಸಲಾಗಿದೆ.
ವಿಚಾರಣೆಯ ಸಂದರ್ಭೆ ಸಮಿತಿಯು ಸಂತ್ರಸ್ತರ ಹೇಳಿಕೆಗಳ ವಿಡಿಯೋ ಚಿತ್ರೀಕರಣವನ್ನು ಸ್ವಿಚ್ಆಫ್ ಮಾಡಿತ್ತು ಎಂದು ಅವರು ಆರೋಪಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಇಬ್ಬರು ಕುಸ್ತಿಪಟುಗಳು ಬ್ರಿಜ್ಭೂಣ್ ಸಿಂಗ್ ಶರಣ್ ವಿರುದ್ಧ ತರಬೇತಿ ವಳೆಏ ಅನಪೇಕ್ಷಣೀಯ ಸ್ಪರ್ಶಿಸುವಿಕೆ ಹಾಗೂ ಜೆರ್ಸಿಗಳನ್ನು ಮೇಲಕ್ಕೆತ್ತಿದ್ದುದು ಸೇರಿದಂತೆ ಲೈಂಗಿಕ ಕಿರುಕುಳದ ಹಲವು ದೂರುಗಳನ್ನು ಸಲ್ಲಿಸಿದ್ದರು.







