ರಿಲಯನ್ಸ್ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಕಲಂದರ್ ಕೌಶಿಕ್ ಆಯ್ಕೆ

ಹಳೆಯಂಗಡಿ, ಮೇ 19: ಬೊಳ್ಳೂರಿನ ರಿಲಯನ್ಸ್ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಕಲಂದರ್ ಕೌಶಿಕ್ ಆಯ್ಕೆಯಾಗಿದ್ದಾರೆ.
ಅಝೀಝ್ ಐ.ಎ.ಕೆ ಅಧ್ಯಕ್ಷತೆಯಲ್ಲಿ ರಿಲಯನ್ಸ್ ಭವನದಲ್ಲಿ ಇತ್ತೀಚೆಗೆ ನಡೆದ ಸಂಸ್ಥೆಯ 27ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ರಿಯಾಝ್ ಕೊಪ್ಪಳ, ಕಾರ್ಯದರ್ಶಿಯಾಗಿ ಮುಬಾರಕ್ ಬೊಳ್ಳೂರು, ಜೂತೆ ಕಾರ್ಯದರ್ಶಿಯಾಗಿ ಫಾರೂಕ್ ಫ್ಯಾನ್ಸಿ, ರಿಯಾಝ್ ಅಲ್ ಅಕ್ಸ, ಲೆಕ್ಕ ಪರಿಶೋಧಕರಾಗಿ ಅಕ್ಬರ್ ಬೊಳ್ಳೂರು ಆಯ್ಕೆಯಾದರು.
ಮಾಧ್ಯಮ ಉಸ್ತುವಾರಿ ಮತ್ತು ಜಿಸಿಸಿ ಸಂಯೋಜಕರಾಗಿ ಕಬೀರ್ ಇಂದಿರಾ ನಗರ, ಶಂಶೀರ್ ಇಂದಿರಾ ನಗರ, ಸ್ವಯಂಸೇವಕ ಉಸ್ತುವಾರಿಯಾಗಿ ಇಕ್ಬಾಲ್ ಎಂ.ಎ., ರಿಯಾಝ್ ಇಂದಿರಾ ನಗರ ಮತ್ತು ಸಲಹೆಗಾರರಾಗಿ ಹಾರಿಸ್ ನವರಂಗ್, ಅಝೀಝ್ ಐಎಕೆ, ಶಮೀಮ್ ಬೊಳ್ಳೂರು, ಮಮ್ತಾಝ್ ಕಲ್ಲಾಪು, ಸಿದ್ದೀಕ್ ಬೊಳ್ಳೂರ್ ಅವರನ್ನು ಆಯ್ಕೆ ಮಾಡಲಾಯಿತು.
ರಿಲಯನ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಇಕ್ಬಾಲ್ ಎಂ.ಎ. ವಾರ್ಷಿಕ ವರದಿ ವಾಚಿಸಿದರು.
ರಿಲಯನ್ಸ್ ಅಸೋಸಿಯೇಶನ್ ಎನ್.ಆರ್.ಐ. ಘಟಕದ ಶಮೀಮ್ ಸೌದಿ ಅರೇಬಿಯಾ, ಶರೀಫ್ ಖತರ್, ಶಮೀಮ್ ದುಬೈ ಉಪಸ್ಥಿತರಿದ್ದರು.