ಜ್ಞಾನವ್ಯಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಮುಂದೂಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ವಾರಣಾಸಿಯ ಗ್ಯಾನವಾಪಿ ಮಸೀದಿಯ ಕಾರ್ಬನ್ ಡೇಟಿಂಗ್ ಸಹಿತ ವೈಜ್ಞಾನಿಕ ಸಮೀಕ್ಷೆಯನ್ನು ಸುಪ್ರೀಂ ಕೋರ್ಟ್ ಇಂದು ಮುಂದೂಡಿದೆ. ಮಸೀದಿಯಲ್ಲಿ ಕಂಡುಬಂದಿದೆ ಎಂದು ಹೇಳಲಾದ 'ಶಿವಲಿಂಗ' ಎಷ್ಟು ಪ್ರಾಚೀನವಾದುದು ಎಂದು ಕಂಡುಕೊಳ್ಳುವ ಉದ್ದೇಶ ಸಮೀಕ್ಷೆಗಿದೆ. ಈ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
ವೈಜ್ಞಾನಿಕ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ವಾರಣಾಸಿಯ ಕೆಳಗಿನ ಹಂತದ ನ್ಯಾಯಾಲಯದ ಆದೇಶದಂತೆ ಗ್ಯಾನವಾಪಿ ದೇವಳ ಸಂಕೀರ್ಣದಲ್ಲಿ ನಡೆಸಲಾದ ವೀಡಿಯೋ ಸಮೀಕ್ಷೆ ವೇಳೆ ಈ ʼಶಿವಲಿಂಗʼ ಎಂದು ಹೇಳಲಾದ ವಸ್ತು ಪತ್ತೆಯಾಗಿತ್ತು.
ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪವೇ ಈ ಮಸೀದಿ ಇದೆ.
Next Story





