ಉಡುಪಿ: ಹಿರಿಯ ನಾಗರಿಕರಿಗೆ ವೈದ್ಯಕೀಯ ತಪಾಸಣಾ ಶಿಬಿರ

ಉಡುಪಿ: ಉಡುಪಿ ಲೋಂಬಾರ್ಡ್ ಮೆಮೊರಿಯಲ್ ಆಸ್ಪತ್ರೆ, ಹಿರಿಯ ನಾಗರಿಕರ ಸಂಘ, ಗಿರಿಜಾ ಹೆಲ್ತ್ಕೇರ್, ಲಯನ್ಸ್ ಮತ್ತು ಲಿಯೋ ಕ್ಲಬ್ ಉಡುಪಿ ಇಂದ್ರಾಳಿ, ಲಯನ್ಸ್ ಕ್ಲಬ್ ಉಡುಪಿ ಅಮೃತ್, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಅಜ್ಜರಕಾಡು ಭಾರತೀಯ ಜನ ಔಷಧಿ ಕೇಂದ್ರ, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ವೈದ್ಯಕೀಯ ಪ್ರತಿನಿಧಿಗಳ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಮತ್ತು ಸಾರ್ವಜನಿಕ ರಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಿಷನ್ ಆಸ್ಪತ್ರೆ ನೂರು ವಸಂತಗಳನ್ನು ಕಳೆದಿದೆ. ಇದು ಕೇವಲ ಆಸ್ಪತ್ರೆ ಸೇವೆ ಅಲ್ಲದೆ ವಿವಿಧ ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹಿರಿಯ ನಾಗರಿಕರಿಗೆ ಆಶ್ರಯ ಮತ್ತು ಚಿಕಿತ್ಸೆ ಕೇಂದ್ರಗಳನ್ನು ಸ್ಥಾಪಿಸಿ, ಸಾರ್ವಜನಿಕರಲ್ಲಿ ಹೊಸ ಭರವಸೆ ಯನ್ನು ಮೂಡಿಸಿದೆ. ಈ ಆಸ್ಪತ್ರೆ ಉಡುಪಿ ಜಿಲ್ಲೆಯ ಹೆಮ್ಮೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ವಿವಿಧ ರೀತಿಯ ಆಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ನಮ್ಮ ಆಸ್ಪತ್ರೆಯು ಮುಂದುವರೆಯುತ್ತಿದ್ದು, ಜೂನ್ ತಿಂಗಳಲ್ಲಿ ಈ ಆಸ್ಪತ್ರೆಗೆ ನೂರು ವರ್ಷ ತುಂಬುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ನಾಗರಿಕ ಸಂಘದ ಉಪಾಧ್ಯಕ್ಷ ನಾಗರಾಜ್, ಗೌರವಾಧ್ಯಕ್ಷ ವಿಶ್ವನಾಥ್ ಹೆಗಡೆ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷ ಮೋಹನ್ ಶೆಟ್ಟಿ, ಉಡುಪಿ ಅಮೃತ್ ಅಧ್ಯಕ್ಷ ಜಯಪ್ರಕಾಶ್ ಭಂಡಾರಿ, ಸುವರ್ಣ ಎಂಟರ್ಪ್ರೈಸಸ್ ಮುಖ್ಯಸ್ಥ ಮಧುಸೂದನ್ ಹೇರೂರು, ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ವಿವೇಕಾನಂದ ಕಾಮತ್, ಜನ ಔಷಧಿ ಕೇಂದ್ರದ ಪ್ರಮುಖರಾದ ಮಿಲ್ಟನ್, ಉದ್ಯಮಿ ಮಹಮ್ಮದ್ ಮೌಲಾ, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಜನರಲ್ ಮ್ಯಾನೇಜರ್ ರಾಜೇಶ್ ಸೇರಿಗಾರ್, ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ಮುಂತಾದವರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ತಜ್ಞರುಗಳಾದ ಡಾ.ಆರ್.ಶ್ರೀಪತಿ, ಡಾ.ದೀಪಾ ವೈ.ರಾವ್, ಡಾ.ಪವಿತ್ರ, ಡಾ.ಅರ್ಜುನ್ ಬಳ್ಳಾಲ್, ಡಾ.ರೂಪಶ್ರೀ, ಡಾ.ಗಣೇಶ್ ಕಾಮತ್, ಡಾ.ನಾಗೇಶ ನಾಯಕ್, ಡಾ.ಸಾರಿಕಾ ಸಹಕರಿಸಿದರು. ರೋಹಿ ರತ್ನಾಕರ್ ಸ್ವಾಗತಿಸಿದರು. ರೆ.ರಾಚಲ್ ಪ್ರಾರ್ಥಿಸಿದರು. ವೈದ್ಯಕೀಯ ಪ್ರತಿನಿಧಿ ರಾಘವೇಂದ್ರ ಪ್ರಭು ಕರ್ವಾಲ್ ಕಾರ್ಯಕ್ರಮ ನಿರೂಪಿಸಿದರು.