ಮಂಗಳೂರು ವಿವಿ ಮಟ್ಟದ ‘ಚೆಮ್ ಸ್ಪೆಕ್ಟ್ರಮ್’ ಸ್ಪರ್ಧೆ ಉದ್ಘಾಟನೆ

ಉಡುಪಿ: ಅಜ್ಜರಕಾಡು ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ ವಿವಿಧ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಮಟ್ಟದ ವಿವಿಧ ಸ್ಪರ್ಧೆ ‘ಚೆಮ್ ಸ್ಪೆಕ್ಟ್ರಮ್ 2023’ನ್ನು ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಸ್ಪರ್ಧೆಯನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಬಿ.ವಿಶಾಲಾಕ್ಷಿ ಮಾತನಾಡಿ, ರಸಾಯನ ಶಾಸ್ತ್ರದಲಿ ್ಲಉನ್ನತ ಶಿಕ್ಷಣ ಮಾಡಿದರೆ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ. ವಿವಿಧ ಕ್ಷೇತ್ರಗಳಿಗೆ ರಸಾಯನ ಶಾಸ್ತ್ರದಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ ಕೊಡಲು ಹೆಚ್ಚು ಹೆಚ್ಚು ವಿದ್ಯಾರ್ಥಿಗಳ ಅವಶ್ಯಕತೆಯಿದೆ ಎಂದರು.
ಇತ್ತೀಚೆಗೆ ವಿದೇಶದಿಂದ ಟಂಕ್ಯುಮ್ ಪೌಂಡರ್ನಲ್ಲಿ ಹುಡಿಯ ರೂಪದಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಚಿನ್ನವನ್ನು ಬೇರ್ಪಡಿಸಿ ಶುದ್ಧ ಚಿನ್ನಕ್ಕೆ ಮಾರ್ಪಾಡು ಮಾಡಲು ರಸಾಯನ ಶಾಸ್ತ್ರ ಸಹಕಾರಿಯಾಯಿತು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ರಸಾಯನ ಶಾಸ್ತ್ರ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಕೃಷ್ಣ ಕಾರಂತ ಶುಭಾಶಂಸನೆಗೈದರು. ರಸಾಯನ ವಿಭಾಗದ ಮುಖ್ಯಸ್ಥರು ಹಾಗೂ ನಿರ್ದೇಶಕ ಡಾ.ಕೆ.ಶ್ರೀಧರ ಪ್ರಸಾದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ರಸಾಯನ ಶಾಸ್ತ್ರದಲ್ಲಿ ರಸಪ್ರಶ್ನೆ ಕಾರ್ಯ ಕ್ರಮವನ್ನು ನಡೆಸಿಕೊಡಲಾಯಿತು. ಸಹಾಯಕ ಪ್ರಾಧ್ಯಾಪಕಿ ಶುಭಾ ಬಿ.ಎಸ್. ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಅಶ್ವಿನಿ ವಂದಿಸಿದರು. ಆಯಿಷಾ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸ್ಪರ್ಧೆಗಳ ವಿಜೇತರು
ರಸಪ್ರಶ್ನೆ ಸ್ಪರ್ಧೆಯಲ್ಲಿ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ವರ್ಷಿಣಿ ಮತ್ತು ಬೈರೇಗೌಡ ಪ್ರಥಮ ಹಾಗೂ ಉಡುಪಿ ಎಂಜಿಎಂ ಕಾಲೇಜಿನ ಜುವರಿಯಾ ಮತ್ತು ಲಿರಿಷಾ ದ್ವಿತೀಯ ಬಹುಮಾನವನ್ನು ಗೆದ್ದುಕೊಂಡರು.
ಸೆಮಿನಾರ್ ಸ್ಪರ್ಧೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸ್ಪರ್ಶಾ ಪ್ರಥಮ ಹಾಗೂ ಮಂಗಳೂರು ಕೆನರಾ ಕಾಲೇಜಿನ ಕ್ಷಮಾ ಕುಂದರ್ ದ್ವಿತೀಯ ಸ್ಥಾನವನ್ನು ಪಡೆದರು. ಸ್ಪರ್ಧೆಯಲ್ಲಿ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಎಂ. ಅದಿತಿ ಪ್ರಥಮ ಮತ್ತು ಉಡುಪಿ ಎಂಜಿಎಂ ಕಾಲೇಜಿನ ಓಂ ರಿತುಂಬರ ದ್ವಿತೀಯ ಸ್ಥಾನ ಗಳಿಸಿದರು.
ಸೆಮಿನಾರ್ ಕಾರ್ಯಕ್ರಮವನ್ನು ಪ್ರೊ.ರಮೇಶ ಚಿಂಬಾಲ್ಕರ್, ಪ್ರೊ ವೆಂಕ ಟಾಚಲ ಮತ್ತು ಡಾ.ಮೇಘನಾ ನಾವಡ ನಿರ್ವಹಿಸಿದರು. ಈ ಕಾರ್ಯಕ್ರವದಲ್ಲಿ ವಿಜ್ಞಾನ ನಿಕಾಯದ ಪ್ರೊ.ರಾಮಚಂದ್ರ ಅಡಿಗ ಜಿ., ಐಕ್ಯೂಎಸಿ ಸಂಚಾಲಕ ಪ್ರೊ.ಸೋಜನ್ ಕೆ.ಜಿ., ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವಾಣಿ ಆರ್.ಬಲ್ಲಾಳ್ ಉಪಸ್ಥಿತರಿದ್ದರು.