Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿಶ್ವದ ಅರ್ಧಕ್ಕೂ ಹೆಚ್ಚಿನ ಸರೋವರಗಳು...

ವಿಶ್ವದ ಅರ್ಧಕ್ಕೂ ಹೆಚ್ಚಿನ ಸರೋವರಗಳು ಬತ್ತುತ್ತಿವೆ: ಅಧ್ಯಯನ ವರದಿ

19 May 2023 6:56 PM IST
share
ವಿಶ್ವದ ಅರ್ಧಕ್ಕೂ ಹೆಚ್ಚಿನ ಸರೋವರಗಳು ಬತ್ತುತ್ತಿವೆ: ಅಧ್ಯಯನ ವರದಿ

ಹೊಸದಿಲ್ಲಿ: ಗುರುವಾರ ಪ್ರಕಟಗೊಂಡ ನೂತನ ಅಧ್ಯಯನ ವರದಿಯಂತೆ ವಿಶ್ವದ ಅರ್ಧಕ್ಕೂ ಹೆಚ್ಚಿನ ಸರೋವರಗಳು ಒಣಗುತ್ತಿವೆ. ಸೈನ್ಸ್ ಜರ್ನಲ್ ನಲ್ಲಿ ತನ್ನ ಅಧ್ಯಯನ ವರದಿಯನ್ನು ಪ್ರಕಟಿಸಿರುವ ಅಂತರರಾಷ್ಟ್ರೀಯ ಸಂಶೋಧನಾ ತಂಡವೊಂದು,ಜಾಗತಿಕ ತಾಪಮಾನ ಮತ್ತು ಮಾನವ ಚಟುವಟಿಕೆಯನ್ನು ಇದಕ್ಕೆ ಮುಖ್ಯ ಹೊಣೆಯನ್ನಾಗಿಸಿದೆ.

ಭೂಮಿಯು ಕೇವಲ ಸುಮಾರು ಶೇ.3ರಷ್ಟು ಸಿಹಿನೀರನ್ನು ಹೊಂದಿದ್ದು, ಈ ಪೈಕಿ ಶೇ.87ರಷ್ಟನ್ನು ನೈಸರ್ಗಿಕ ಸರೋವರಗಳು ಮತ್ತು ಜಲಾಶಯಗಳು ಹೊಂದಿವೆ. ಎಂದು  ಹೇಳಿರುವ ವರದಿಯು, ನೀರಿನ ಸೂಕ್ತ ನಿರ್ವಹಣೆಯ ಅಗತ್ಯವನ್ನು ಒತ್ತಿ ಹೇಳಿದೆ.

ಕೊಲರಾಡೋ ವಿವಿಯ ಜಲವಿಜ್ಞಾನಿ ಫಾಂಗ್ಫಾಂಗ್ ಯಾವೋ ನೇತೃತ್ವದಲ್ಲಿ ನಡೆದ ಸಂಶೋಧನೆಯಂತೆ ವಿಶ್ವದ ಬೃಹತ್ ಸರೋವರಗಳು ಮತ್ತು ಜಲಾಶಯಗಳು 1990ರ ದಶಕದ ಅರಂಭದಿಂದಲೇ ಕುಗ್ಗುತ್ತಿವೆ.

ವಿಶ್ವದ ಕೆಲವು ಪ್ರಮುಖ ಸಿಹಿನೀರು ಮೂಲಗಳು ಕಳೆದ ಸುಮಾರು ಮೂರು ದಶಕಗಳಲ್ಲಿ ವಾರ್ಷಿಕ ಸುಮಾರು 22 ಗಿಗಾಟನ್ಗಳ ಸಂಚಿತ ದರದಲ್ಲಿ ನೀರನ್ನು ಕಳೆದುಕೊಂಡಿವೆ ಎಂದು ವರದಿಯು ಹೇಳಿದೆ. ಅರ್ಧಕ್ಕಿಂತ ಹೆಚ್ಚಿನ ನೀರಿನ ಕುಸಿತಕ್ಕೆ ಮಾನವ ಬಳಕೆ ಅಥವಾ ತಾಪಮಾನ ಏರಿಕೆಯ ಮೂಲಕ ಅಪರೋಕ್ಷ ಮಾನವ ಹಸ್ತಕ್ಷೇಪವು  ಕಾರಣವಾಗಿದೆ ಎಂದು ಹೇಳಿರುವ ಯಾವೋ, ಇದರಲ್ಲಿ ತಾಪಮಾನ ಏರಿಕೆಯು ಹೆಚ್ಚಿನ ಪಾಲನ್ನು ಹೊಂದಿದೆ ಎಂದು ಬೆಟ್ಟು ಮಾಡಿದ್ದಾರೆ.

ಮಳೆ ಬೀಳುವಿಕೆ ಮತ್ತು  ನೀರಿನ ಹರಿವು ಹಾಗೂ ಜಲಸಂಚಯದಲ್ಲಿ ಬದಲಾವಣೆಗಳು ಮತ್ತು ಹೆಚ್ಚುತ್ತಿರುವ ತಾಪಮಾನ ಜಾಗತಿಕವಾಗಿ ಸರೋವರಗಳಲ್ಲಿಯ ನೀರಿನ ಮಟ್ಟ ಕುಸಿತಕ್ಕೆ ಕಾರಣವಾಗಿವೆ ಎನ್ನುವುದನ್ನೂ ಅಧ್ಯಯನವು ಕಂಡುಕೊಂಡಿದೆ.

ತಂಡವು ವಿಶ್ವದಲ್ಲಿಯ ಸುಮಾರು 2,000 ಸರೋವರಗಳಲ್ಲಿಯ ನೀರಿನ ಮಟ್ಟಗಳಲ್ಲಿ ಬದಲಾವಣೆಯನ್ನು ಲೆಕ್ಕ ಹಾಕಿದ್ದು, ವರದಿಯು 1992ರಿಂದ 2020ರ ನಡುವೆ ಸಂಗ್ರಹಿಸಲಾದ ಉಪಗ್ರಹ ದತ್ತಾಂಶಗಳನ್ನು ಆಧರಿಸಿದೆ.

ಅಮೆರಿಕದ ಲೇಕ್ ಮೀಡ್ 28 ವರ್ಷಗಳ ಅವಧಿಯಲ್ಲಿ ಮೂರನೇ ಎರಡರಷ್ಟು ನೀರನ್ನು ಕಳೆದುಕೊಂಡಿದೆ. ಸಮರ್ಥನೀಯವಲ್ಲದ ಮಾನವ ಬಳಕೆಯು ಮಧ್ಯ ಏಶ್ಯಾದ ಆರಲ್ ಸಮುದ್ರ ಮತ್ತು ಮಧ್ಯ ಪ್ರಾಚ್ಯದ ಮೃತ ಸಮುದ್ರ ಸೇರಿದಂತೆ ಸರೋವರಗಳು ಒಣಗಲು ಕಾರಣವಾಗಿದೆ ಎಂದೂ ಹೇಳಿರುವ ವರದಿಯು,ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಫಘಾನಿಸ್ತಾನ್,ಈಜಿಪ್ಟ್ ಮತ್ತು ಮಂಗೋಲಿಯಾಗಳಲ್ಲಿನ ಸರೋವರಗಳಲ್ಲಿಯ  ಮೇಲ್ಮೈ ನೀರು ಆವಿಯಾಗುವ ದರವೂ ಏರಿದೆ ಎಂದಿದೆ.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಪ್ಪಿಸಲು ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ (2.7 ಡಿಗ್ರಿ ಫ್ಯಾರೆನ್ಹೀಟ್)ಗೆ ಸೀಮಿತಗೊಳಿಸುವುದು ಅಗತ್ಯವಾಗಿದೆ. ವಿಶ್ವದಲ್ಲಿ ತಾಪಮಾನವು ಪ್ರಸ್ತುತ ಸುಮಾರು 1.1 ಡಿ.ಸೆಲ್ಸಿಯಸ್(1.9 ಡಿ.ಫ್ಯಾರೆನ್ಹೀಟ್) ದರದಲ್ಲಿ ಹೆಚ್ಚುತ್ತಿದೆ ಎಂದು ಸಂಶೋಧಕರ ತಂಡವು ಹೇಳಿದೆ.

share
Next Story
X