ನಿಜವಾದ ಅಧ್ಯಾಪಕ ಸದಾ ಅಧ್ಯಯನ ಶೀಲ: ಡಾ.ನಾರಾಯಣ ಶೆಟ್ಟಿ

ಉಡುಪಿ: ಪ್ರಸಕ್ತ ಸಮಾಜ ಅಧ್ಯಾಪಕರನ್ನು ನೋಡುವ ದೃಷ್ಟಿ ಬಹಳ ಬದಲಾಗಿದೆ. ಹೆತ್ತವರು, ಸಮುದಾಯ ಮತ್ತು ರಾಷ್ಟ್ರ ಶಿಕ್ಷಕರ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.ಹೀಗಾಗಿ ಅಧ್ಯಾಪಕರು ಎಷ್ಟೇ ಕಷ್ಡವಾಗಲಿ, ಆದರ್ಶದ ಮಾದರಿಗಳಾಗಿರಬೇಕು.ಅಧ್ಯಾಪನ ಹೊಟ್ಟೆಪಾಡಿನ ಉದ್ಯೋಗವಲ್ಲ, ಅದೊಂದು ಪ್ರವೃತ್ತಿ ಎಂಬುದನ್ನು ಮರೆಯಕೂಡದು. ಎಂದು ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ ಎನ್.ಪಿ.ನಾರಾಯಣ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯ ಡಾ.ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಅವರು ಮಾನಾಡುತಿದ್ದರು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ವಾರ್ಷಿಕ ವರದಿ ಮಂಡಿಸಿದರು.
ಉಪನ್ಯಾಸಕಿ ಧನಲಕ್ಷ್ಮೀ ಸ್ವಾಗತಿಸಿದರೆ, ಉಷಾ ಅತಿಥಿಗಳನ್ನು ಪರಿಚಯಿ ಸಿದರು. ಮಮತಾ ಸಾಮಂತ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರೆ ಪ್ರೀತಿ ಎಸ್ ರಾವ್ ವಂದಿಸಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳಿಸಿದ ಸಂಧ್ಯಾ ಮತ್ತು ಪಲ್ಲವಿ ಶುಭನುಡಿಗಳನ್ನಾಡಿದರು. ಪ್ರಸಕ್ತ ಸಾಲಿನ ವಿದ್ಯಾರ್ಥಿನಿ ಕುಮಾರಿ ರೋಶ್ನಿ ರೋದಾ ಸೋನ್ಸ್ ಪ್ರತಿಸ್ಪಂದಿಸಿದರು.ಶ್ರೀಮತಿ ರೂಪಾ.ಕೆ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ವಿದ್ಯಾರ್ಥಿ ಶಿಕ್ಷಕರು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಸಿಕೊಟ್ಟರು.







