ಜಾರ್ಖಂಡ್: ಐಇಡಿ ಸ್ಫೋಟ; ಬಾಲಕ ಬಲಿ

ರಾಂಚಿ, ಮೇ 19: ಶಂಕಿತ ಮಾವೋವಾದಿಗಳು ಇರಿಸಿದ್ದ ಐಇಡಿ ಸ್ಫೋಟಗೊಂಡ ಪರಿಣಾಮ 9 ವರ್ಷದ ಬಾಲಕ ಮೃತಪಟ್ಟ ಘಟನೆ ಜಾರ್ಖಂಡ್ ನ ಪೂರ್ವ ಸಿಂಗ್ಭೂಮ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ಕೆಂಡು ಎಲೆಗಳನ್ನು ಸಂಗ್ರಹಿಸಲು ರೋಲಾಬ್ರುಪಿ ಜೆಂಗಗಾಡ ಅರಣ್ಯಕ್ಕೆ ತೆರಳಿದ ಸಂದರ್ಭ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಸುವ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿ ಇರಿಸಲಾಗಿದ್ದ ಐಇಡಿ ಸ್ಫೋಟಗೊಂಡಿತು. ಇದರಿಂದ ಬಾಲಕ ಮೃತಪಟ್ಟ ಎಂದು ಪೊಲೀಸ್ ಅಧೀಕ್ಷಕ ಅಶುತೋಷ್ ಶೇಖರ್ ತಿಳಿಸಿದ್ದಾರೆ.
Next Story





