ಪಾಕಿಸ್ತಾನ: ಬಾಂಬ್ ಸ್ಫೋಟ ಒಬ್ಬ ಮೃತ್ಯು; 3 ಮಂದಿಗೆ ಗಾಯ

ಇಸ್ಲಮಾಬಾದ್, ಮೇ 19: ಪೇಷಾವರದಲ್ಲಿ ಮೋಟಾರ್ಸೈಕಲ್ಗೆ ಸಿಕ್ಕಿಸಲಾಗಿದ್ದ ಬಾಂಬ್ ಸ್ಫೋಟಿಸಿ ಕನಿಷ್ಟ ಒಬ್ಬ ಮೃತಪಟ್ಟಿದ್ದು ಇತರ 3 ಮಂದಿ ಗಾಯಗೊಂಡಿರುವುದಾಗಿ ಜಿಯೊ ನ್ಯೂಸ್ ಗುರುವಾರ ವರದಿ ಮಾಡಿದೆ.
ಖೈಬರ್ ಪಖ್ತೂಂಕ್ವಾ ಪ್ರಾಂತದ ರಾಜಧಾನಿ ಪೇಷಾವರದಲ್ಲಿ ಸ್ಫೋಟ ಸಂಭವಿಸಿದೆ. ಗ್ಯಾರೇಜ್ನಲ್ಲಿ ಇಟ್ಟಿದ್ದ ಬೈಕನ್ನು ರಿಪೇರಿ ಮಾಡುತ್ತಿದ್ದಾಗ ಬೈಕಿನಲ್ಲಿಟ್ಟಿದ್ದ ಬಾಂಬ್ ಸ್ಫೋಟಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪೇಷಾವರ ನಗರದ ರಿಂಗ್ರೋಡ್ನಲ್ಲಿ ಸ್ಫೋಟ ಸಂಭವಿಸಿದ್ದು ಓರ್ವ ಮೃತಪಟ್ಟಿದ್ದಾನೆ. ಇತರ ಮೂವರು ಗಾಯಗೊಂಡಿದ್ದು ಇವರಲ್ಲಿ ಒಬ್ಬ ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
Next Story