ರಶ್ಯ ವಿರುದ್ಧದ ನಿರ್ಬಂಧ ತೀವ್ರ: ಜಿ7 ಸದಸ್ಯರ ನಿರ್ಧಾರ
ಟೋಕಿಯೊ, ಮೇ 19: ರಶ್ಯ ವಿರುದ್ಧದ ನಿರ್ಬಂಧಗಳನ್ನು ತೀವ್ರಗೊಳಿಸಲು ಜಿ7 ದೇಶಗಳ ಮುಖಂಡರು ನಿರ್ಧರಿಸಿದ್ದು ಉಕ್ರೇನ್ ಗೆ ಆರ್ಥಿಕ ನೆರವನ್ನು ಮುಂದುವರಿಸುವುದಾಗಿ ವಾಗ್ದಾನ ಮಾಡಿದ್ದಾರೆ.
ರಶ್ಯದ ಆಕ್ರಮಣಕ್ಕೆ ಪೂರಕವಾದ ಎಲ್ಲಾ ಪ್ರಮುಖ ವಸ್ತುಗಳ, ಕೈಗಾರಿಕಾ ಯಂತ್ರೋಪಕರಣಗಳು, ಉಪಕರಣಗಳು ಮತ್ತು ರಶ್ಯ ತನ್ನ ಯುದ್ಧತಂತ್ರಗಳನ್ನು ಪುನನಿರ್ಮಿಸಲು ಬಳಸುವ ಇತರ ತಂತ್ರಜ್ಞಾನಗಳ ರಫ್ತಿನ ಮೇಲೆ ಇನ್ನಷ್ಟು ಕಠಿಣ ನಿರ್ಬಂಧ ವಿಧಿಸಲು ನಾವು ನಿರ್ಧರಿಸಿದ್ದೇವೆ. ಅಲ್ಲದೆ ಉತ್ಪಾದನೆ, ನಿರ್ಮಾಣ, ಸಾರಿಗೆ ಮತ್ತು ವ್ಯಾಪಾರ ಸೇವೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ವಿರುದ್ಧವೂ ನಿರ್ಬಂಧ ಜಾರಿಯಾಗಲಿದೆ ಎಂದು ಜಿ7 ಮುಖಂಡರ ಹೇಳಿಕೆ ತಿಳಿಸಿದೆ.
ಮುಂಚೂಣಿ ಕ್ಷೇತ್ರಕ್ಕೆ ವಸ್ತುಗಳನ್ನು ಸಾಗಿಸುವ ಘಟಕಗಳನ್ನು ಗುರಿಯಾಗಿಸುವುದು, ರಶ್ಯದ ಯುದ್ಧವನ್ನು ಭೌತಿಕವಾಗಿ ಬೆಂಬಲಿಸುವ ಮೂರನೇ ದೇಶದ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ
Next Story