ಬಲೂಚಿಸ್ತಾನ: ಜಮಾತೆ ಇಸ್ಲಾಮಿ ಮುಖ್ಯಸ್ಥರ ರ್ಯಾಲಿಯಲ್ಲಿ ಆತ್ಮಹತ್ಯಾ ದಾಳಿ

ಇಸ್ಲಮಾಬಾದ್, ಮೇ 19: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಜಮಾತೆ ಇಸ್ಲಾಮಿ ಮುಖ್ಯಸ್ಥ ಸಿರಾಜುಲ್ ಹಖ್ ಅವರ ವಾಹನಗಳ ಸಾಲಿನ ಮೇಲೆ ಶುಕ್ರವಾರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು ಕನಿಷ್ಟ 5 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಲೂಚಿಸ್ತಾನದ ಝೊಹಬ್‍ನಲ್ಲಿ ರಾಜಕೀಯ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬೆಂಗಾವಲು ಪಡೆಯೊಂದಿಗೆ ಆಗಮಿಸಿದ್ದ ಸಿರಾಜುಲ್ ಹಖ್‍ರನ್ನು ಜನತೆ ಅಭಿನಂದಿಸುತ್ತಿದ್ದಾಗ ಬಳಿಗೆ ಬಂದ ಓರ್ವ ವ್ಯಕ್ತಿ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದಿಂದ ಕನಿಷ್ಟ 5 ಮಂದಿ ಗಾಯಗೊಂಡಿದ್ದಾರೆ. ಆದರೆ ಹಖ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ. ದಾಳಿ ಮಾಡಿದ ವ್ಯಕ್ತಿ ಸ್ಫೋಟದಲ್ಲಿ ಮೃತಪಟ್ಟಿದ್ದು ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
TRIGGER WARNING: EXPLOSION
— Daily Scoop TV (@DailyScoopTV1) May 19, 2023
Jamaat-e-Islami (#JI) chief Sirajul Haq was reported safe in an explosion that targeted his convoy headed to a public gathering in Zhob, Balochistan.
At least one person was reported dead in the blast although it wasn't immediately clear whether the… pic.twitter.com/EeZQ8AD4Tz







