Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ತೆರಿಗೆ ಪಟ್ಟಿಯ ಮ್ಯುಟೇಷನ್‌ನ್ನು...

ತೆರಿಗೆ ಪಟ್ಟಿಯ ಮ್ಯುಟೇಷನ್‌ನ್ನು ನಿರ್ವಹಿಸದ 253 ಗ್ರಾಮ ಪಂಚಾಯತ್‌ಗಳು!

ಜಿ.ಮಹಾಂತೇಶ್ಜಿ.ಮಹಾಂತೇಶ್20 May 2023 10:36 AM IST
share
ತೆರಿಗೆ ಪಟ್ಟಿಯ ಮ್ಯುಟೇಷನ್‌ನ್ನು ನಿರ್ವಹಿಸದ 253 ಗ್ರಾಮ ಪಂಚಾಯತ್‌ಗಳು!

ಬೆಂಗಳೂರು: ರಾಜ್ಯದ ಒಟ್ಟು ಗ್ರಾಮ ಪಂಚಾಯತ್‌ಗಳ ಪೈಕಿ 253 ಪಂಚಾಯತ್‌ಗಳು ಕಟ್ಟಡ ಮತ್ತು ಭೂಮಿಗೆ ಸಂಬಂಧಿಸಿದ ತೆರಿಗೆ ನಿರ್ಧರಣೆ ಪಟ್ಟಿ, ಆಸ್ತಿ ತೆರಿಗೆ ಪಟ್ಟಿಯ ಮ್ಯುಟೇಷನ್‌ನ್ನು ನಿರ್ವಹಿಸಿಲ್ಲ ಎಂಬುದನ್ನು ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 246(1) ಮತ್ತು ಗ್ರಾಮ ಪಂಚಾಯತ್‌ಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಗಳು 2006ರ ನಿಯಮ 112(1) ಅನ್ವಯ ರಾಜ್ಯದ ಗ್ರಾಮ ಪಂಚಾಯತ್‌ಗಳ 2020-21ನೇ ಸಾಲಿನ ಆರ್ಥಿಕ ವ್ಯವಹಾರಗಳ ಲೆಕ್ಕಪರಿಶೋಧನೆ ನಡೆಸಿ ಈ ಸಂಬಂಧ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಈ ವರದಿಯ ಪ್ರತಿಯು ‘ಣhe-ಜಿiಟe.iಟಿ’ಗೆ ಲಭ್ಯವಾಗಿದೆ.

ತೆರಿಗೆ ನಿರ್ಧರಣಕ್ಕಾಗಿ ಯಾವುದೇ ಆಸ್ತಿಗಳನ್ನು ಒಳಪಡಿಸಿದಾಗ ಅಥವಾ ತೆರಿಗೆ ನಿರ್ಧರಣವನ್ನು ಹೆಚ್ಚಿಸಿದಾಗ ಅಥವಾ ತೆರಿಗೆ ನಿರ್ಧರಣ ಪಟ್ಟಿಯ ದೃಢೀಕರಣದ ನಂತರದಲ್ಲಿ ಬೇಡಿಕೆಯಲ್ಲಿ ಯಾವುದಾದರೂ ಬದಲಾವಣೆ ಮಾಡಿದಾಗ ನಮೂನೆ 10ರ ಮ್ಯುಟೇಷನ್ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಎಂಬ ನಿಯಮವಿದೆ. ಆದರೆ 335 ಪಂಚಾಯತ್‌ಗಳು ನಮೂನೆ 10ನ್ನು ನಿರ್ವಹಿಸಿಲ್ಲ.

ತೆರಿಗೆ ನಿರ್ಧರಣೆ ಪಟ್ಟಿ ಅನುಪಸ್ಥಿತಿಯಲ್ಲಿ ಮ್ಯುಟೇಷನ್ ರಿಜಿಸ್ಟರ್‌ನ ನಿಖರತೆಯನ್ನು ಸಮರ್ಥಿಸಲಾಗುವುದಿಲ್ಲ. ಇದರಿಂದಾಗಿ ಆಸ್ತಿ ತೆರಿಗೆ ಬೇಡಿಕೆಯ ಏರಿಕೆ/ಇಳಿಕೆಯು ನಿಖರವಾಗಿ ಆಗದೇ ಆದಾಯದಲ್ಲಿ ನಷ್ಟವುಂಟಾಗುವ ಸಂಭವನೀಯತೆ ಹೆಚ್ಚಿದೆ ಎಂದು ವರದಿಯು ವಿವರಿಸಿದೆ.

ಭೂಮಿ ಮತ್ತು ಕಟ್ಟಡಗಳ ತೆರಿಗೆಗಳ ಬೇಡಿಕೆ, ವಸೂಲಾತಿ ಹಾಗೂ ಬಾಕಿ ರಿಜಿಸ್ಟರ್ (ನಮೂನೆ-11) ನಿರ್ವಹಿಸಬೇಕು. ಆದರೆ 139 ಪಂಚಾಯತ್‌ಗಳು ಇಂತಹ ನಮೂನೆಯನ್ನು ನಿರ್ವಹಿಸಿಲ್ಲ. ನಿಯಮ 34ರ ನಮೂನೆ 15ರಲ್ಲಿ ಆದಾಯ ತರುವ ಆಸ್ತಿಪಾಸ್ತಿಗಳ ವಿವರ ಮತ್ತು ಕಂದಾಯ ವಸೂಲಾತಿ ವಿವರದ ರಿಜಿಸ್ಟರನ್ನು 428 ಪಂಚಾಯತ್‌ಗಳು ನಿರ್ವಹಿಸಿಲ್ಲ.

ಬೆಳಗಾವಿ ಜಿಲ್ಲೆಯ 50 ಪಂಚಾಯತ್‌ಗಳು ತೆರಿಗೆ ನಿರ್ಧರಣೆ ಪಟ್ಟಿಯನ್ನು ನಿರ್ವಹಿಸಿಲ್ಲ. ಅದೇ ರೀತಿ ಇದೇ ಜಿಲ್ಲೆಯಲ್ಲಿ ಮ್ಯುಟೇಷನ್ ರಿಜಸ್ಟರ್, ಡಿಸಿಬಿ ವಹಿ, ಮತ್ತು ಆದಾಯ ತರುವ ಆಸ್ತಿಪಾಸ್ತಿಗಳ ವಿವರ ಮತ್ತು ಕಂದಾಯ ವಸೂಲಿ ವಿವರದ ರಿಜಿಸ್ಟರನ್ನು ನಿರ್ವಹಿಸಿಲ್ಲ. ಈ ಮೂರು ವಿಭಾಗಗಳಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ತಲಾ 50 ಪಂಚಾಯತ್‌ಗಳಿವೆ ಎಂದು ವರದಿಯಲ್ಲಿ ಪಟ್ಟಿ ಒದಗಿಸಿರುವುದು ತಿಳಿದು ಬಂದಿದೆ.

ನಮೂನೆ 29ರಲ್ಲಿಯೂ ಪೀಠೋಪಕರಣ, ಯಂತ್ರೋಪಕರಣ ಮತ್ತು ಇತರ ಸಾಮಗ್ರಿಗಳ ಚರಾಸ್ತಿ ರಿಜಿಸ್ಟರನ್ನು 350 ಪಂಚಾಯತ್‌ಗಳು ನಿರ್ವಹಿಸಿಲ್ಲ. ಅದೇ ರೀತಿ 436 ಗ್ರಾಮ ಪಂಚಾಯತ್‌ಗಳು ಭೂ ದಾಖಲಾತಿ ರಿಜಿಸ್ಟರನ್ನು ನಿರ್ವಹಿಸಿಲ್ಲ. 394 ಪಂಚಾಯತ್‌ಗಳು ಕಟ್ಟಡ, ರಸ್ತೆ, ಸೇತುವೆ, ಅಡಿಗಾಲುವೆ, ಚರಂಡಿ, ಬೀದಿದೀಪದ ಕಂಬಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಸ್ಥಿರಾಸ್ತಿಯ ರಿಜಿಸ್ಟರನ್ನು ನಿರ್ವಹಿಸಿಲ್ಲ ಎಂದು ವರದಿಯು ಬಹಿರಂಗಗೊಳಿಸಿದೆ. ಅದೇ ರೀತಿ 339 ಗ್ರಾಮ ಪಂಚಾಯತ್‌ಗಳು ಪ್ರಸಕ್ತ ಸಾಲಿನಲ್ಲಿ ತೆರಿಗೆ ಪರಿಷ್ಕರಣೆ ಮಾಡಿಲ್ಲ. ಆಂತರಿಕ ಆದಾಯಗಳ ಸಂಗ್ರಹಕ್ಕಾಗಿ 189 ಗ್ರಾಮ ಪಂಚಾಯತ್‌ಗಳು ಮಾತ್ರ ಆಸ್ತಿ ಮಾಲಕರಿಗೆ ನೋಟಿಸ್ ಜಾರಿ ಮತ್ತು ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಜನರಿಗೆ ತಿಳಿವಳಿಕೆ ನೀಡುವಂತಹ ಕ್ರಮಗಳನ್ನು ಕೈಗೊಂಡಿದೆ. ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಲು ಹೆಚ್ಚಿನ ಪಂಚಾಯತ್‌ಗಳು ಅಗತ್ಯ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ವರದಿಯಿಂದ ಗೊತ್ತಾಗಿದೆ.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X