ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ರಾಜಕೀಯ ಜೀವನದ ಕುರಿತ ಕಿರುಚಿತ್ರ ಹಂಚಿದ ಕಾಂಗ್ರೆಸ್

ಬೆಂಗಳೂರು: ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್ ಅವರ ಸಾರ್ವಜನಿಕ ಸೇವೆಯ ಬದುಕಿನ ದೃಶ್ಯಾವಿಷ್ಕಾರವನ್ನು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಂಚಿಕೊಂಡಿದೆ.
''ಜನಸೇವೆಯನ್ನೇ ಬದುಕಾಗಿಸಿಕೊಂಡ ಸಿದ್ದರಾಮಯ್ಯನವರು ಸರ್ವಜನಾಂಗದ ನಾಯಕರಾಗಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ಕರ್ನಾಟಕವನ್ನು ಸಮೃದ್ಧ ನಾಡಾಗಿಸಲಿದ್ದಾರೆ'' ಎಂದು ಕಾಂಗ್ರೆಸ್ ಬರೆದುಕೊಂಡಿದೆ.
ಇನ್ನು ಡಿ.ಕೆ ಶಿವಕುಮಾರ್ ಪಕ್ಷದ ಕಟ್ಟಾಳುವಾಗಿ, ಪಕ್ಷವನ್ನು ಬಲಪಡಿಸುವಲ್ಲಿ ಅವಿರತವಾಗಿ ಶ್ರಮಿಸುವ ಧೀಮಂತ ನಾಯಕ ಎಂದು ಕಾಂಗ್ರೆಸ್ ಬಣ್ಣಿಸಿದೆ.
ಕರ್ನಾಟಕದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಶ್ರೀ @DKShivakumar ಅವರ ಸಾರ್ವಜನಿಕ ಸೇವೆಯ ಬದುಕಿನ ಒಂದು ಕಿರುನೋಟ
— Karnataka Congress (@INCKarnataka) May 20, 2023
ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ, ಪಕ್ಷವನ್ನು ಬಲಪಡಿಸುವಲ್ಲಿ ಅವಿರತವಾಗಿ ಶ್ರಮಿಸುವ ಧೀಮಂತ ನಾಯಕ pic.twitter.com/HU4mRkAI0m
ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಶ್ರೀ @siddaramaiah ಅವರ ಸಾರ್ವಜನಿಕ ಸೇವೆಯ ಬದುಕಿನ ಒಂದು ಕಿರುನೋಟ.
— Karnataka Congress (@INCKarnataka) May 20, 2023
ಜನಸೇವೆಯನ್ನೇ ಬದುಕಾಗಿಸಿಕೊಂಡ ಸಿದ್ದರಾಮಯ್ಯನವರು ಸರ್ವಜನಾಂಗದ ನಾಯಕರಾಗಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ಕರ್ನಾಟಕವನ್ನು ಸಮೃದ್ಧ ನಾಡಾಗಿಸಲಿದ್ದಾರೆ. pic.twitter.com/lroi9gi4Ef