ಮಂಗಳೂರು: ಚಿಣ್ಣರ ಕ್ರಿಯಾಶೀಲತೆಗಾಗಿ ಚಿಣ್ಣರ ಮೇಳ

ಮಂಗಳೂರು: ಚಿಣ್ಣರ ಚಾವಡಿ ವಾಮಂಜೂರು ಇದರ ವತಿಯಿಂದ ಮಕ್ಕಳ ರಜಾ ಕಲಿಕಾ ಶಿಬಿರವು ತಿರುವೈಲು ಜೈ ಶಂಕರ್ ಮಿತ್ರ ಮಂಡಳಿ ವಠಾರದಲ್ಲಿ ಆರಂಭಗೊಂಡಿತು.
ಜೈ ಶಂಕರ್ ಮಿತ್ಯ ಮಂಡಳಿಯ ಅಧ್ಯಕ್ಷ ದಿವಾಕರ್ ಆಚಾರ್ಯ ಶಿವಬಿರವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಭವಿಷ್ಯದ ಸಮಾಜವನ್ನು ಕಟ್ಟುವವರು ಇಂತಹ ಮಕ್ಕಳ ಪ್ರತಿಭೆಗೆ ಅವಕಾಶಗಳನ್ನು, ವೇದಿಕೆಗಳನ್ನು ಒದಗಿಸಿಕೊಡಬೇಕಾಗಿದೆ ಮತ್ತು ಅವರ ಪ್ರತಿಭೆಗಳನ್ನು ಗುರುತಿಸಬೇಕಾಗಿರುವುದು ಈ ಸಮಾಜದ ಕರ್ತವ್ಯ ಎಂದರು.
ಈ ಸಮಾರಂಭದಲ್ಲಿ ಜೈ ಶಂಕರ್ ಮಿತ್ರ ಮಂಡಳಿಯ ಗೌರವಾಧ್ಯಕ್ಷರಾದ ಕೆ ಗಂಗಯ್ಯ ಅಮಿನ್ ಮಾತನಾಡುತ್ತಾ ಮಕ್ಕಳು ಇಂದಿನ ಮೊಬೈಲ್ ಯುಗದಲ್ಲಿ ಅಂಗಳದ ಆಟಗಳನ್ನು ಮರೆತಿದ್ದಾರೆ.
ಮಕ್ಕಳಲ್ಲಿ ಮೊಬೈಲ್ ಹಾವಳಿಯಿಂದ ಕ್ರಿಯಾಶೀಲತೆಯು ಕಡಿಮೆಯಾಗುತ್ತಿದೆ. ಹೆತ್ತವರು ಕೂಡ ಈ ಕುರಿತು ಗಮನಹರಿಸುತ್ತಿಲ್ಲ ಹಾಗಾಗಿ ಮಕ್ಕಳನ್ನು ಮತ್ತೆ ಅಂಗಳಕ್ಕೆ ಕರೆ ತರುವ ಪ್ರಯತ್ನವನ್ನು ಈ ಚಿಣ್ಣರ ಚಾವಡಿ ನಡೆಸಲಿ ಎಂದರು.
ಶಿಕ್ಷಕರಾದ ದೀಪಿಕಾ ಇವರು ವಿದ್ಯಾರ್ಥಿಗಳನ್ನು ಶುಭಕೋರಿ ಮಾತನಾಡಿದರು. ಶಿಬಿರದಲ್ಲಿ ಮಾಲತಿ, ಮನೋಜ್ ವಾಮಂಜೂರು, ಜೀವಿತ ದೇವಸಬೆಟ್ಟು, ಕಾರ್ತಿಶ್ ಸಂಕೇಶಬೆಟ್ಟು, ಶೇಖರ ಪರಾರಿ ಉಪಸ್ಥಿತರಿದ್ದರು.