ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ನೆಲಕ್ಕುರುಳಿದ ಮರಗಳು

ಬೆಂಗಳೂರು, ಮೇ 20: ಬಿಸಿಲಿನ ತಾಪಕ್ಕೆ ಬೆಂದಿದ್ದ ನಗರದ ಜನರಿಗೆ ಶನಿವಾರ ಮಳೆಯ ದರ್ಶನವಾಗಿದೆ. ಗುಡುಗು ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ರಾಜಧಾನಿಯಲ್ಲಿ ಹಲವು ಕಡೆ ಮರಗಳು ಉರುಳಿ ಬಿದ್ದಿದ್ದು, ಹಲವು ವಾಹನಗಳು ಜಖಂಗೊಂಡಿವೆ.
ಬೆಂಗಳೂರಿನ ಕಾರ್ಪೊರೇಶನ್, ಮಾರ್ಕೆಟ್, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ಸೇರಿ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಅಲ್ಲದೆ, ನೆಲಮಂಗಲ ಸುತ್ತಮುತ್ತ ಕೂಡ ಧಾರಾಕಾರ ಮಳೆಯಾಗಿದ್ದು, ಏಕಾಏಕಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸಿದರು.
ನಗರದ ಹಲವು ಮಾರ್ಗಗಳಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಹಲವು ಭಾಗಗಳಲ್ಲಿ ಮರಗಳು ಧರೆಗೆ ಉರುಳಿದೆ. ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದವು. ಭಾರೀ ಮಳೆಯ ಪರಿಣಾಮ ಮರಗಳ ಕೆಳಗೆ ನಿಂತು ಆಶ್ರಯ ಪಡೆಯಲು ಜನರು ಹಿಂದೇಟು ಹಾಕಿದ್ದು ಕಂಡು ಬಂದಿತು.
ನಗರದ ಕಾರ್ಪೊರೇಶನ್ ಹತ್ತಿರದ ರಸ್ತೆಗಳಲ್ಲಿ ಧರೆಗೆ ಉರುಳಿದ ಮರದ ರೆಂಬೆ ಕೊಂಬೆ ನೆಲಕ್ಕುರುಳಿದ್ದು, ಬಸ್ ಮೇಲೆ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದ ಪರಿಣಾಮ ಬಸ್ ಜಖಂ ಗೊಂಡಿತ್ತು. ಇತ್ತ ಕಾರ್ಪೊರೇಶನ್ ಬಳಿ ರಸ್ತೆ ಬದಿ ನಿಂತಿದ್ದ ಆಟೋ ಮೇಲೆ ಮರದ ಕೊಂಬೆ ಉರುಳಿ ಬಿದ್ದು, ಆಟೋ ಸಂಪೂರ್ಣ ಹಾನಿಯಾಗಿದೆ. ಆಟೋ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಜೆಪಿ ನಗರದಲ್ಲಿ ಭಾರೀ ಮಳೆಯಿಂದ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ನಾಲ್ಕು ಕಾರುಗಳಿಗೆ ಹಾನಿಯಾಗಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಕಬ್ಬನ್ ಪಾರ್ಕ್‍ನಲ್ಲೂ ಹಲವು ಮರಗಳು ಉರುಳಿಬಿದ್ದಿದೆ.
.jpg)
.jpg)
.jpg)
.jpg)
.jpg)
.jpg)