ಲಗೇಜ್ ಶುಲ್ಕ ತಪ್ಪಿಸಲು 5.5 ಕಿ.ಗ್ರಾಂ ತೂಕದಷ್ಟು ಬಟ್ಟೆ ಧರಿಸಿದ ಮಹಿಳೆ

ಸಿಡ್ನಿ: ವಿಮಾನ ಪ್ರಯಾಣದ ಸಂದರ್ಭ ಲಗ್ಗೇಜ್ ಶುಲ್ಕ ಪಾವತಿಯನ್ನು ತಪ್ಪಿಸಲು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಸೂಟ್ಕೇಸ್ ನಲ್ಲಿದ್ದ ಎಲ್ಲಾ ಬಟ್ಟೆಗಳನ್ನೂ ಧರಿಸುವ ಉಪಾಯ ಮಾಡಿದರೂ, ದಂಡ ಪಾವತಿಸಬೇಕಾಯಿತು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
19 ವರ್ಷದ ಆಡ್ರಿಯಾನಾ ಒಕಾಂಪೊ ಏರ್ಲೈನ್ ಜೆಟ್ಸ್ಟಾರ್ ವಿಮಾನದಲ್ಲಿ ಮೆಲ್ಬೋರ್ನ್ ನಿಂದ ಅಡಿಲೇಡ್ ಗೆ ತನ್ನ ಸ್ನೇಹಿತೆಯರೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ಆಕೆಯ ಲಗೇಜ್ ನ ತೂಕ ಗರಿಷ್ಟ 7 ಕಿ.ಗ್ರಾಂನ ಮಿತಿಯನ್ನು ಮೀರಿದೆ. ಆಗ ಆಕೆ ಹೆಚ್ಚುವರಿ ಬಟ್ಟೆಗಳನ್ನು ಮೈಮೇಲೆ ಧರಿಸಿದ್ದಾಳೆ.
ಆಕೆಯ ಸ್ನೇಹಿತೆಯರೂ ಇದನ್ನು ಅನುಕರಿಸಿದ್ದಾರೆ. ಆದರೆ ಮೈಮೇಲೆ ಆರು ಸುತ್ತು ಬಟ್ಟೆ ಧರಿಸಿಕೊಂಡರೂ, ಲಗೇಜ್ ಹೆಚ್ಚುವರಿ 1 ಕಿ.ಗ್ರಾಂ ತೂಕವಿತ್ತು. ಬಳಿಕ ಇವರಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು 65 ಡಾಲರ್ ದಂಡ ವಿಧಿಸಿದ್ದಾರೆ ಎಂದು ವರದಿ ಹೇಳಿದೆ.
Next Story