ಮೇ 22: ಜಾಮಿಉಲ್ ಫುತೂಹ್ಗೆ ಶೈಖ್ ಹಬೀಬ್ ಉಮರ್ ಬಿನ್ ಹಫೀಳ್ ಭೇಟಿ
ಕೋಝಿಕ್ಕೋಡ್: ಯಮನ್ ವಿದ್ವಾಂಸ ಶೈಖ್ ಹಬೀಬ್ ಉಮರ್ ಬಿನ್ ಹಫೀಳ್ ಕೋಝಿಕ್ಕೋಡ್ ಮರ್ಕಝ್ ನಾಲೆಜ್ ಸಿಟಿಯ ಇಂಡಿಯನ್ ಗ್ರ್ಯಾಂಡ್ ಮಸ್ಜಿದ್ ಜಾಮಿಉಲ್ ಫುತೂಹ್ನಲ್ಲಿ ಸೋಮವಾರ ಮಗ್ರಿಬ್ ನಮಾಝಿನ ಬಳಿಕ ನಡೆಯಲಿರುವ ಹಳ್ರತುಲ್ ಫುತೂಹ್ ಆಧ್ಯಾತ್ಮಿಕ ಸಂಗಮ ಮತ್ತು ಖುತುಬುಲ್ ಆಲಂ ಶೈಖುನಾ ಸಿ.ಎಂ ವಲಿಯುಲ್ಲಾಹಿ ರವರ ಉರೂಸ್ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಲಿದ್ದಾರೆ.
ಸುಲ್ತಾನುಲ್ ಉಲಮಾ ಶೈಖ್ ಅಬೂಬಕರ್ ಅಹ್ಮದ್, ಜಾಮಿಯಾ ಮರ್ಕಝ್ ಅಧ್ಯಕ್ಷರಾದ ಸಯ್ಯಿದ್ ಅಲೀ ಬಾಫಖೀ ತಂಙಳ್, ಮರ್ಕಝ್ ನಾಲೆಡ್ಜ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಎ.ಪಿ. ಅಬ್ದುಲ್ ಹಕೀಂ ಅಝ್ಹರಿ, ಕೇರಳ ಹಜ್ ಸಮಿತಿ ಅಧ್ಯಕ್ಷರಾದ ಸಿ.ಮುಹಮ್ಮದ್ ಫೈಝಿ ಮತ್ತು ಇನ್ನಿತರ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story