ಬ್ಯಾಟರಾಯನಪುರ ಬಿಜೆಪಿ ನಾಯಕರಿಗೆ ದೇಶದ್ರೋಹಿಗಳು ಎಂದ ಕಾರ್ಯಕರ್ತೆ!
ವೀಡಿಯೊ ವೈರಲ್
ಬೆಂಗಳೂರು: ನಗರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಚಿಂತನ ಮಂಥನ ಸಭೆಯಲ್ಲಿ ಪಕ್ಷ ನಾಯಕರ ವಿರುದ್ಧವೇ ಕಾರ್ಯಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾದ ಘಟನೆ ವರದಿಯಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ.
ಸಭೆಯ ವೇದಿಕೆ ಮೇಲಿದ್ದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆನ್ನಲಾದ ಸ್ಥಳೀಯ ಕಾರ್ಯಕರ್ತೆಯೊಬ್ಬರು, ''ಪಕ್ಷದ ಸೋಲಿಗೆ ನೀವೇ ಕಾರಣ, ನೀವು ಭಾರತೀಯರಾ? ಅಥವಾ ಪಾಕಿಸ್ತಾನಿಗಳಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿರುವ ನೀವು ದೇಶದ್ರೋಹಿಗಳು'' ಎಂದು ಕಿಡಿಕಾರಿದ್ದಾರೆ.
'ನಾವು ಹಲವಾರು ದಿನಗಳಿಂದ ನಿದ್ದೆ ಮಾಡದೇ ಪಕ್ಷಕ್ಕಾಗಿ ದುಡಿಯುತ್ತಿದ್ದರೆ, ನೀವು ಮಾತ್ರ ಜಾತಿ ಅಂತ ಹೇಳಿ ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದೀರಿ' ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ವೇದಿಕೆಯಲ್ಲಿ ಯಾರ್ಯಾರು ಕುಳಿತಿದ್ದರೆಂದು ತಿಳಿದಿಲ್ಲ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ (2023ರ ಚುನಾವಣೆ) ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಕೃಷ್ಣ ಭೈರೇಗೌಡ ಎದುರು ಪರಾಭವಗೊಂಡಿದ್ದಾರೆ.
Local BJP leaders in Byatarayanapura, Bengaluru are called anti-national traitors and Pakistanis by BJP workers/members for not doing enough for the local candidate to win. They are equating party loyalty to Patriotism. pic.twitter.com/4FlKIxkmSb
— Mohammed Zubair (@zoo_bear) May 20, 2023
ಬ್ಯಾಟರಾಯನಪುರ ಭಾ.ಜ.ಪಾ ಮಂಥನ ಸಭೆಯಲ್ಲಿ ಪಕ್ಷಕ್ಕಾಗಿ ದುಡಿದ ವೈದ್ಯೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕುರಿತು ಸ್ಥಳೀಯ ಭಾ.ಜ.ಪ ನಾಯಕರ ಗ್ರಹಚಾರ ಬಿಡಿಸಿದರು. pic.twitter.com/KcetLcP5Fb
— Akash Dixit | ಆಕಾಶ್ ದೀಕ್ಷಿತ್ (@dixithru) May 20, 2023
*ಬ್ಯಾಟರಾಯನಪುರ ಬಿಜೆಪಿಯ ಅಭ್ಯರ್ಥಿ ೫೦೦೦ ಮತಗಳ ಅಂತರದಲ್ಲಿ ಸೋತರು. ಮಂಥನ ಸಭೆಯಲ್ಲಿ ಒಬ್ಬಳು ಮಹಿಳೆ ವೃತ್ತಿ ಯಲ್ಲಿ ವೈದ್ಯೆ ವೇದಿಕೆಯಲ್ಲಿ ಇರುವ ಗಣ್ಯರಿಗೆ ಕ್ಲಾಸ್ ತೆಗೆದುಕೊಂಡ ರೀತಿ ಬೊಂಬಾಟ್ ಆಗಿದೆ. ಪಕ್ಷದ ಗಣ್ಯರು ಮತ್ತು ಉನ್ನತ ಹುದ್ದೆಯಲ್ಲಿ ಇರುವವರು ಕಾರ್ಯಕರ್ತರನ್ನು ಕಡೆಗಣಿಸಿದ್ದೇ ಕರ್ನಾಟಕದಲ್ಲಿ ಬಿಜೆಪಿ ಸೋಲಲು ಕಾರಣ. pic.twitter.com/CfnzsobcxJ
— Padmanabha upadhya (@nrup25) May 20, 2023