ರಾಜೀವ್ ಗಾಂಧಿ ಪುಣ್ಯತಿಥಿ; ಕಾಂಗ್ರೆಸ್ ನಾಯಕರಿಂದ ಗೌರವ ನಮನ

ಬೆಂಗಳೂರು: ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹುತಾತ್ಮರಾದ ದಿನವಾದ ಇಂದು ದೇಶಾದ್ಯಂತ ಕಾಂಗ್ರೆಸ್ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ, ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ, ದೇಶದ ಐಕ್ಯತೆ - ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ, ಮಾಜಿ ಪ್ರಧಾನಿ, ಭಾರತ ರತ್ನ 'ರಾಜೀವ್ ಗಾಂಧಿ' ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ ಎಂದು ಸ್ಮರಿಸಿದೆ.
ತಮಿಳುನಾಡಿನ ಚೆನ್ನೈನಲ್ಲಿರುವ ಶ್ರೀಪೆರಂಬುದೂರ್ ಎಂಬ ಹಳ್ಳಿಯಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಗಿತ್ತು.
1991 ರಲ್ಲಿ, ಚುನಾವಣೆಯ ಪ್ರಚಾರದ ಸಮಯದಲ್ಲಿ ಎಲ್ ಟಿಟಿಇ (ಶ್ರೀಲಂಕಾದ ತಮಿಳು ಉಗ್ರಗಾಮಿ ಮತ್ತು ರಾಜಕೀಯ ಸಂಘಟನೆ) ಆತ್ಮಾಹುತಿ ಬಾಂಬ್ ಮೂಲಕ ಅವರನ್ನು ಹತ್ಯೆ ಮಾಡಿತು.
ಭಾರತದ ಅತ್ಯಂತ ಕಿರಿಯ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾಗಿದ್ದ ಅವರು ತನ್ನ 40 ನೇ ವಯಸ್ಸಿನಲ್ಲಿ ಈ ಹುದ್ದೆಗೆ ನೇಮಕವಾಗಿದ್ದರು. ತಮ್ಮ ತಾಯಿ ಇಂದಿರಾ ಗಾಂಧಿಯವರ ಮರಣದ ನಂತರ ಒಲ್ಲದ ಮನಸ್ಸಿನಿಂದ ರಾಜೀವ್ ಗಾಂಧಿ ಅವರು ರಾಜಕೀಯಕ್ಕೆ ಸೇರಬೇಕಾಯಿತು.
ರಾಜೀವ್ ಗಾಂಧಿಯವರು ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸುವ, ಪುನರುಜ್ಜೀವನಗೊಳಿಸುವ ಮತ್ತು ಹೊಸ ನೀತಿಗಳನ್ನು ತರುವ ಮೂಲಕ ಶಿಕ್ಷಣಕ್ಕೆ ತಮ್ಮ ದೊಡ್ಡ ಕೊಡುಗೆಯನ್ನು ನೀಡಿದರು. ಅವರ ಮಾರ್ಗದರ್ಶನದಲ್ಲಿ 'ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲಾಯಿತು.
ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ, ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ,
— Karnataka Congress (@INCKarnataka) May 21, 2023
ದೇಶದ ಐಕ್ಯತೆ - ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ,
ಮಾಜಿ ಪ್ರಧಾನಿ, ಭಾರತ ರತ್ನ 'ರಾಜೀವ್ ಗಾಂಧಿ' ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ. pic.twitter.com/wYRqgOrXM6
Tributes to former Prime Minister Shri #RajivGandhi on his death anniversary.
— Siddaramaiah (@siddaramaiah) May 21, 2023
His contribution to universal adult franchise, decentralisation of power & providing reservation to backward classes has resulted in political equality in India. pic.twitter.com/3Sz0ghSxTW








