ಹರಿಹರ: ಉಪನೋಂದಣಾಧಿಕಾರಿ ದಸ್ತು ಸಲಹೆಗಾರ ಲೋಕಾಯುಕ್ತ ಬಲೆಗೆ

ದಾವಣಗೆರೆ: ಹರಿಹರ ಉಪನೋಂದಣಾಧಿಕಾರಿ ಕಚೇರಿಯ ದಸ್ತು ಬರಹಗಾರ ಶನಿವಾರ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಎಂ.ಬಿ.ಪರಮೇಶ್ ಲೋಕಾಯುಕ್ತ ಬೆಲೆಗೆ ಬಿದ್ದ ದಸ್ತು ಬರಹಗಾರ. ಎಚ್.ಕೆ. ಮಂಜುನಾಥ್ ಎಂಬವರು ಮನೆಯನ್ನು ಖರೀದಿ ಮಾಡಿದ್ದು, ಮೇ.19ರಂದು ಸೇಲ್ ಡೀಡ್ ನೋಂದಣಿ ಪತ್ರವನ್ನು ನೀಡುವ ಸಹಾಯ ಮಾಡುವ ಸಂಬಂಧ ಉಪ ನೋಂದಣಾಧಿಕಾರಿಗಳಿಗೆ ಹಣ ಕೊಡಬೇಕೆಂದು 2 ರೂ.ನಂತೆ 60 ಸಾವಿರ ರೂಪಾಯಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದ.
ಅಂತಿಮವಾಗಿ 20 ಸಾವಿರ ರೂಪಾಯಿ ಕೊಡುವುದಕ್ಕೆ ಬೇಡಿಕೆ ಇಟ್ಟಿದ್ದಾರೆ. ಮುಂಗಡವಾಗಿ 7 ಸಾವಿರ ರೂ. ನೀಡಿದ ಬಳಿಕ 13 ಸಾಚಿರ ರೂ. ನೀಡುವಂತೆ ಕೇಳಿದ್ದಾರೆ. ನಂತರ ಎಚ್.ಕೆ.ಮಂಜುನಾಥ್ ಅವರು ಲೋಕಾಯುಕ್ತರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಲೋಕಾಯುಕ್ತರ ಸಲಹೆಯಂತೆ ಮಂಜುನಾಥ್ ಶನಿವಾರ ಸಂಜೆ ಹರಿಹರ ಉಪನೋಂದಣಾಧಿಕಾರಿ ಕಚೇರಿಯಲ್ಲಿ 13 ಸಾವಿರ ರೂ. ಲಂಚ ಸ್ಚೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಎನ್.ಎಚ್.ಆಂಜನೇಯ, ಸಿಬ್ಬಂದಿ ಎಸ್.ಎಂ.ವೀರೇಶಯ್ಯ, ಎನ್.ಆರ್.ಚಂದ್ರಶೇಖರ್,ವಿ.ಎಚ್.ಆಂಜನೇಯ, ಧನರಾಜ್, ಬಸವರಾಜ್, ಕೃಷ್ಣನಾಯ್ಕ್ ದಾಳಿ ನಡೆಸಿ ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.





