ಪರ್ಕಳದಲ್ಲಿ ತಾಳಮದ್ದಲೆ ಸಪ್ತಾಹ ಉದ್ಘಾಟನೆ

ಉಡುಪಿ, ಮೇ 21: ಯಕ್ಷಗಾನ ಕಲಾರಂಗದ ವತಿಯಿಂದ ಮೇ 27ರವರೆಗೆ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಳ್ಳ ಲಾಗಿರುವ ತಾಳಮದ್ದಲೆ ಸಪ್ತಾಹವನ್ನು ವೈದ್ಯ ಡಾ.ಕಬ್ಯಾಡಿ ಹರಿರಾಮ ಆಚಾರ್ಯ ರವಿವಾರ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭಾಗವಹಿಸಿ ಶುಭ ಹಾರೈಸಿದರು. ಕರ್ನಾಟಕ ಬ್ಯಾಂಕ್ ಎಜಿಎಂ ಬಿ. ರಾಜ ಗೋಪಾಲ್, ಪರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ರಾಜ್ ಹೆಗ್ಡೆ, ಉದ್ಯಮಿ ಗಣೇಶ್ ಪಾಟೀಲ್, ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಮುರಳಿ ಕಡೆಕಾರ್ ಮೊದಲಾದ ಉಪಸ್ಥಿತರಿದ್ದರು. ಬಳಿಕ ‘ಭೀಷ್ಮಾರ್ಜುನ’ ತಾಳಮದ್ದಲೆಯು ಪ್ರಸ್ತುತಗೊಂಡಿತು.
Next Story





