ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ದಾದಿಯರ ದಿನಾಚರಣೆ, ಸನ್ಮಾನ ಕಾರ್ಯಕ್ರಮ

ಮಂಗಳೂರು: ನಗರದ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನಲ್ಲಿ ದಾದಿಯರ ದಿನಾಚರಣೆ ಕಾರ್ಯಕ್ರಮ ರವಿವಾರ ನಡೆಯಿತು.
ಈ ಸಂದರ್ಭ ಚರ್ಚ್ ವ್ಯಾಪ್ತಿಯಲ್ಲಿರುವ ದಾದಿಯರನ್ನು ಚರ್ಚಿನ ಪ್ರಧಾನ ಧರ್ಮಗುರು ಫಾ. ಆಲ್ಬನ್ ಡಿ ಸೋಜಾ ಅವರು ಸನ್ಮಾನಿಸಿದರು.
ದಾದಿಯರಾದ ಟ್ರೀಜಾ ಡಿಕುನ್ಹಾ, ಸಬೀನಾ ಮಿನೇಜಸ್, ಫ್ಲಾವಿಯಾ ಅಲ್ವಾರಿಸ್, ನಿವೇದಿತಾ ವೇಗಸ್, ಆನೆಟ್ ಮರಿಯಾ ವಾಸ್, ಜಸಿಂತಾ ವಾಲ್ಡರ್, ಜಸಿಂತಾ ಲೋನಾ ಮೆಂಡೊನ್ಸ, ವೀಣಾ ಕ್ರಾಸ್ತಾ, ಜ್ಯೋತಿ ಪಿಂಟೊ, ಅರುಣ ರೇಗೊ, ಜೆಸಿಂತಾ ಫುರ್ತಾಡೋ, ಜೋಬಿತಾ ಗಾಮಾ, ಬಬಿತಾ ಗಾಮಾ, ಹೆಲೆನ್ ಲೋಬೊ, ಫ್ಲೇವಿ ಲೋಬೊ, ಜಾನೆಟ್ ಡಿ ಸೋಜಾ, ವೆಲೆಂತಿ ಡಿ ಸೋಜಾ, ಲೆನ್ನಿ ಫೆನಾರ್ಂಡಿಸ್ ಅವರನ್ನು ಸಮ್ಮಾನಿಸಲಾಯಿತು.
ಸಂತ ಸೆಬಾಸ್ಟಿಯನ್ ವಾರ್ಡಿನ ಮುಖ್ಯಸ್ಥರಾದ ಸೆಲಿನ್ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು.
Next Story