ನಿಷೇಧಿತ ನಕ್ಸಲ್ ಸಂಘಟನೆ ನಾಯಕ ದಿನೇಶ್ ಗೋಪೆ ಬಂಧನ
ಹೊಸದಿಲ್ಲಿ,ಮೇ 21: ಜಾರ್ಖಂಡ್ನ ನಿಷೇಧಿತ ನಕ್ಸಲ್ ಸಂಘಟನೆ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ಎಫ್ಐ)ದ ಸ್ವಘೋಷಿತ ಮುಖಂಡ ದಿನೇಶ್ ಗೋಪೆಯನ್ನು ರಾಷ್ಟ್ರೀಯ ತನಿಖಾಸಂಸ್ಥೆ (ಎನ್ಐಎ) ಶನಿವಾರ ಬಂಧಿಸಿದೆ. ಆರೋಪಿಯು 102ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದು, ಆತನ ತಲೆಗೆ 40 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
2016ರಲ್ಲಿ ಪಿಎಲ್ಎಫ್ಐ ಕಾರ್ಯಕರ್ತರಿಂದ 25.38 ಲಕ್ಷ ರೂ. ಅಮಾನ್ಯಗೊಂಡ ನೋಟುಗಳನ್ನು ಮುಟ್ಟುಗೋಲು ಹಾಕಿದ ಪ್ರಕರಣದಲ್ಲಿ ಗೋಪೆ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿತ್ತು. ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿರುವ ಗೋಪೆಯನ್ನು ಹೊಸದಿಲ್ಲಿಯಲ್ಲಿ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಜಾರ್ಖಂಡ್ , ಬಿಹಾರ ಹಾಗೂ ಒಡಿಶಾಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಬಹುತೇಕ ಕೊಲೆಗಳು, ಅಪಹರಣಗಳು, ಬೆದರಿಕೆ, ಸುಲಿಗೆ ಹಾಗೂ ಪಿಎಲ್ಎಫ್ಐಗೆ ನಿಧಿಗಳನ್ನು ಸಂಗ್ರಹಿಸುತ್ತಿದ್ದ ಆರೋಪಗಳಿಗೆ ಸಂಬಂಧಿಸಿದ್ದಾಗಿವೆ.
Next Story