ಮಣಿಪುರದ ಇಂಫಾಲ್ ನಲ್ಲಿ ಮತ್ತೆ ಗಲಭೆ ಪ್ರಾರಂಭ, ಕರ್ಫ್ಯೂ ಜಾರಿ: ಮತ್ತಷ್ಟು ಸೈನಿಕರ ನಿಯೋಜನೆ

ಗುವಾಹಟಿ: ಇಂದು ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿದ್ದು, ಸೇನೆ ಮತ್ತು ಅರೆಸೇನಾ ಪಡೆಗಳು ಮಣಿಪುರಕ್ಕೆ ಧಾವಿಸಿವೆ ಎಂದು ndtv.com ವರದಿ ಮಾಡಿದೆ. ರಾಜ್ಯದ ರಾಜಧಾನಿ ಇಂಫಾಲ್‌ನ ನ್ಯೂ ಚೆಕ್‌ಕಾನ್ ಪ್ರದೇಶದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಬಗ್ಗೆ ಮೈಟೆಯಿ ಮತ್ತು ಕುಕಿ ಸಮುದಾಯಗಳ ಜನರು ಹೊಡೆದಾಟ ನಡೆಸಿದ್ದಾರೆ ಎನ್ನಲಾಗಿದೆ.
ಈ ಪ್ರದೇಶದಿಂದ ಬೆಂಕಿ ಹಚ್ಚಿದ ಪ್ರಕರಣ ಬಂದ ನಂತರ ಕರ್ಫ್ಯೂ ಘೋಷಿಸಲಾಯಿತು.
ಈ ಹಿಂದೆ ಸಂಜೆ 4ರವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು.
Next Story